Monday, July 06, 2009

ಒನ್ದು ಜಿಗ್ನಾಸೆ

ಕನಕದಾಸರ ಪದಗಳನ್ನು ಕೇಳಿದಾಗಲೆಲ್ಲಾ ನನ್ಗೆ ಅನ್ನಿಸ್ತಾ ಇರುತ್ತೆ, ಪ್ರೀತಿ ಪ್ರೇಮ ಅನ್ನೊದು , ಸನ್ಗಾತಿ ಬೇಕು ಅನ್ನೊದು ಇದೆಲ್ಲ ನಶ್ವರ ಅಲ್ಲವ.
ಇವರು ನನ್ನೊರು, ಅವರು ಪರರು ಇದೆಲ್ಲ ಯಾಕೆ ಮಾಡ್ತೇವೆ ನಾವು. ನಮ್ಮ ನಮ್ಮಲ್ಲೆ ಯಾಕೆ ಹೊಡೆದಾಡ್ತೀವೆ. ಚಿಕ್ಕನ್ದಿನಿನ್ದಾ ನಾನು ನೊಡಿದ್ದು ಇದನ್ನೆ.
ಪ್ರಪಚದ ಜನರೆಲ್ಲಾ ಇವ ನನ್ನ ಜಾತಿಯವ, ಅವ ಬೇರೆ ಜಾತಿಯವ. ನಮ್ಮ ಜಾತಿ ದೊಡ್ಡದು, ನಿಮ್ಮದು ಚಿಕ್ಕದು. ನಾನು ಹಣವನ್ತ, ನೀನು ನನಗಿನ್ತಾ ಕಮ್ಮಿ.
ಹೀಗೆ ಇನ್ನೂ ಏನೇನೂ ಕಾರಣಗಳು ನಮ್ಮನ್ನು ಬೇರೆ ಬೇರೆಯಾಗಿಯೆ ಇರಿಸಿವೆ. ಇಷ್ತೆಲ್ಲಾ ಮಾಡಿ ಕೊನೆಗೆ ನಾವು ಏನಾಗುತ್ತೇವೆ? ಅದು ನಮಗ ಯಾರಿಗು ತಿಳಿದಿಲ್ಲಾ.
ಆದರು ನಾವು ಈ ಸಣ್ಣ ಸಣ್ಣ ಕಾರಣಗಳನ್ನು ಇಟ್ಟುಕೋನ್ಡು ಜೀವಿಸ್ತೇವೆ. ಇದರಿನ್ದ ಏನು ಪ್ರಯೋಜನ.

ಮೊನ್ನೆ ಊರಿಗೆ ಹೋದಾಗ, ಎಲ್ಲಾರು ಆರಾಮಾಗಿ ಕುಳಿತು ಮಾತಾಡ್ತಾ ಇದ್ದರು. ಅದರಲ್ಲಿ ನನಗೆ ಚಿಕ್ಕ ಅಜ್ಜಿ ಆಗುವರೊಬ್ಬರು , ತಮ್ಮ ಹೆಚ್ಚುಗಾರಿಕಿಯನ್ನು ತೋರಿಸಲು ,
ನಾನು ಯವತ್ತೂ ಸನ್ಖಷ್ಟ ಚಥುರ್ತಿ ಅನ್ನ ಮರೆಯೊದೇ ಇಲ್ಲಪ್ಪ. ನಾವು ಯಾವುದೆ ಕಾರಣಕ್ಕು ಮರಿಬಾರ್ದು . ನಾನು ಸುಮ್ಮನಿರಲಾರ್ದೆ ಹೋದೆ. ಅಜ್ಜಿ, ಪೂಜೆ ಮಾಡಿದರೆ ಬರಿ ದೇವರಿಗೆ
ಗೌರವ ತೊರಿಸಿದ್ರೆ ಆಗುತ್ಯೆ. ಕಸ್ಟದಲ್ಲಿ ಇರೊರಿಗೆ ಸಹಾಯ ಮಾಡಿದ್ರು ಅದು ಪೂಜೆನೇ ತಾನೆ? ಅನ್ಥ ಕೆಳಿಬಿಟ್ಟೆ. ಅಜ್ಜಿ , ಕೆರಳಿಕೊನ್ಡಿ, ನೋಡೆ ರಾಧ ನಿನ್ನ ಮಕ್ಕಳಿಗೆ ದೇವರು ದಿನ್ಡ್ರು
ಅನ್ದ್ರೆ ಮರಿಯಾದೆನೆ ಇಲ್ಲಮ್ಮ, ಹೇಗೆ ಉದ್ದಾರವಗ್ತಾರೊ ನಾನ್ ಕಾಣೆ. ನಮ್ಮಮ್ಮ ಹಣೆಹಣೆ ಚಚ್ಕೊತಾ ಇದ್ದದನ್ನ ನಾನು ಮಾತ್ರ ನೊಡಿದೆ.

ಇದರಿನ್ದ ನನ್ಗೆ ಅರ್ಥ ಆಗದಿದ್ದಿದು ಒನ್ದೆ. ಬಡವರಿಗೆ ಸಹಾಯ ಮಾಡಿ, ಅದರಿನ್ದ ದೇವರನ್ನು ಕಾಣಿ ಅನ್ತಾ ಅನ್ದಿದ್ದು ತಪ್ಪೆ? ಹೀಗೆ ದೇವರನ್ನು ಕಾಣಲು ಆಗದೆ?

ಪಡುವಾರಹಳ್ಳಿ ಪಾನ್ಡವರು ಅನ್ನೊ ಚಿತ್ರದಲ್ಲಿ ಒನ್ದು ಹಾಡಿದೆ ’ ಕಣ್ಣು ಮುಚ್ಹಿ ಕುಳಿತರೇ ಕಾಣುವೆ ನೀ ಒಬ್ಬ ಶಿವನು ಶಿವನೇ ಕಾಣುವೆ ನೀ ಒಬ್ಬ ಶಿವನು, ಕಣ್ಣು ಬಿಟ್ಟು ನೋಡಲೂ ಕಾಣ್ವರು ನೂರಾರು ಶಿವರು ಶಿವನೇ ಕಾಣ್ವರು ನೂರಾರು ಶಿವರು’. ಎಲ್ಲಾ ಧರ್ಮಗಳು ದಾನ ಮಾಡಿರಿ ಅನ್ತ ಹೇಳುತ್ತೆ ಅನ್ತಾ ಕೇಳಿದ್ದೆವೆ. ಆದರೆ ಯೆನ್ತವರಿಗೆ ದಾನ ಮಾಡಬೇಕು. ಅದಕ್ಕು ಏಲ್ಲೊ ಕೇಳಿದ್ದ ಮಾತು ’ ಸಥ್ಪಾತ್ರರಿಗೆ ಸತ್ ಸಮಯದಲ್ಲೆ ದಾನ ಮಾಡಬೇಕು’ ಅನ್ತ. ಅದರೆ ದಾನ ಅನ್ನೊದು ನಮ್ಮ ಜೊತೆಗಿನ ಮನುಶ್ಯರಲ್ಲಿ ಇರುವ ಕೆಲಸಗೇಡಿತನಕ್ಕೆ ಸಹಾಯ ಮಾಡುವತಾಗಬರದು ಅಲ್ಲವೆ? ಅದರೆ ಭಿಕ್ಶೆ ಬೇಡುವ ಹಣ್ಣ್ಹಣ್ಣು ಮುದುಕ ಮುದುಕಿಯರನ್ನು ನೋಡಿದಾಗ, ಭಿಕ್ಶೆ ಹಾಕದಿರಲು ಸಾಧ್ಯವೆ?

ಒಮ್ಮೊಮ್ಮೆ ನನಗೆ ಅನ್ನಿಸುತ್ತದೆ, ಈ ಧರಮಗಳು ಅನ್ನೊವು, ಮನುಶ್ಯ ನಿರ್ಮಿಸಿಕೊನ್ಡ ರೀತಿ ರೇಶೆಗಳು ಅನ್ತಾ. ನಾವುಗಳು ಸದ್ಮನುಶ್ಯಾರಗಿ ಬಾಳಲು, ದೆವರು ಅನ್ನೊ ಮಹಾಶಕ್ತಿನ ನಮ್ಮ ಸಣ್ಣ ಊಹೆಗೆ ತಕ್ಕನ್ತೆ , ಊಹಿಸಿಕೋನ್ಡು ಬಾಳ್ತಾ ಇದ್ದೆವೆ. ಅದರೆ ಇದೇ ತಿಳಿದ ಜನ , ಮನುಸ್ಮ್ರುತಿ ಪ್ರಕಾರವಾಗಲಿ, ಚರ್ಚ್ ಪರ ಮನುಶ್ಯರಾಗಲಿ, ಯಾವುದೆ ಧರ್ಮದ ಜನರಾಗಲಿ, ಈ ಭೂಮಿ ಮೇಲೆ ಬರಿ ಒನ್ದು ಗನ್ಡು ಒನ್ದು ಹೆಣ್ಣಿನಿನ್ದ ಜೀವ ರಾಶಿ ಸ್ರುಸ್ಟಿ ಆಯ್ತು ಅನ್ತರೆ. ಹಾಗೆನ್ದರೆ, ನಾವೆಲ್ಲಾ ಅಣ್ಣ ತಮ್ಮನ್ದಿರು ಅಲ್ಲವೆ? ನಾವು ಯಾಕೆ ನಾನು ದೊಡ್ಡವ, ನೀನು ಸಣ್ಣವ ಅನ್ತ ಜಗಳ ಆಡೊದು. ನನ್ನ ಸಣ್ಣ ಮದುಳಿಗೆ ಇದೇ ತೋರಿದ್ದು. ಸರಿಯೋ ತಪ್ಪೋ ಅದು ದೇವರಿಗೆ ಅರ್ಪಿತ.

No comments:

Post a Comment