gateಅನ್ನು ತೆಗೆದು ಒಳಕ್ಕೆ ಬರುತಿದ್ದ ರಾಜೆಶನ್ನ ನೊಡಿ ಸದಾಶಿವ ರಾಯರು " ಬಾ ರಾಜೇಶ , ನಿನ್ನ ಸ್ನೇಹಿತ ಇನ್ನು ಮೇಲೆ ಅವನ ರೂಮಿನಲ್ಲಿ ಇನ್ನು ಮಲಗಿದ್ದಾನೆ....ಎಳಿಸು ಹೊಗಪ್ಪ... ನಿನ್ನಿನ್ದ ಉಷಾ ರಾಗ ಕೆಳಿನೆ ಅವನು ಎಳೊಧು.... ನಮ್ಮ ಕೂಗಿಗೆಲ್ಲ ಅವನು ಎಳೊಲ್ಲ"
ರಾಜೇಶ : ಬಿಡಿ uncle ಅವನದ್ದು ಇದೆಲ್ಲ ನಿಮಗೆ ನನಗೆ ಎಲ್ಲಾ ಹೊಸದೆನುನ್ ಅಲ್ವಲ್ಲಾ .... ನನ್ಗು ಅವನನ್ನ ನೋಡದೆ ದಿನ ಅಗೊಲ್ಲ ......
ಸದಾಶಿವ : ಸರಿನಪ್ಪ ನಿಮ್ಮ ಇಬ್ರ ಸ್ನೇಹ ಕನ್ದು ಖುಶಿ ಅಗುತ್ತೆ .... ಒಳಗಡೆ ಹೋಗು ನಿಮ್ಮ aunty ತಿನ್ಡಿ ಮಾದ್ಥಾ ಇದ್ದಳೆ ಅನ್ನಿಸುತ್ತೆ...ಅವನ್ನ ಎಳಿಸಿ ರೆಡಿ ಅಗೋಕೆ ಹೇಳು .... officeಗೆ lateಆಗ್ಥಾ ಇದೆ ಅನ್ನಿಸುತ್ತೆ .....
ರಾಜೇಶ : ಸರಿ uncle.....
ತಲೆ ಬಾಗಿಲನ್ನು ದಾಟುತಿರುವಾಗಲೆ ಸರಸ್ವತಿ " ಬಾ ರಾಜೇಶ , ಅವನು ಇನ್ನು ಮಲಗಿಧಾನೆ ಅನ್ನಿಸುತ್ತೆ....ಅವನ್ನ ಎಳಿಸು ಹೋಗು, ಅವನು ರೆಡಿ ಅಗೊದ್ರೊಳೊಗಡೆ ತಿನ್ಡಿ ರೆಡಿ ಅಗಿರುತ್ತೆ....
ರಾಜೇಶ ಸರಿ aunty ಅನ್ಥ ಹೀಳಿ , ರಾಮು ರೂಮಿನೊಳಕ್ಕೆ ಕಾಲಿಡುತ್ತಾನೆ.....
ಇತ್ತ ಇದಾವುದರ ಪರಿವೆಯೇ ಇಲ್ಲದೆ, ಮುಖದಲ್ಲಿ ಮನ್ದ್ಹಾಸ ತೋರುತ್ತಾ, ಹೊಸದೊನ್ದು ಕನಸನ್ನು ಕಾಣುತ್ತಾ ಸುಖ್ಹ ನಿದ್ರೆಯಲ್ಲಿ ರಾಮು ಇದ್ದನು...ಆದರೆ ಯಾರೊ ಅವನನ್ನು ತಳ್ಳಿದ ಹಾಗಾಗಿ ಎದ್ದು ನೊಡುತ್ತಾನೆ....ಅಲ್ಲಿ ರಾಜೇಶನಿದ್ದಾನೆ......ಎನೊ ಮಗಾ ನಾನು ಬನ್ದು ಎಳಿಸೊ ವರ್ಗೂ ನೀನು ಎಳೋದೆ ಇಲ್ಲವಲ್ಲ.....officeಗೆ late ಆಗ್ಥಾ ಇಲ್ವ ಅನ್ಥ ರಾಜೇಶ ಗೊಣ್ಗ್ಥಾ ಇದ್ದ.....
ರಾಮು ಮತ್ತು ರಾಜೇಶ ಇಬ್ರು ಚಿಕ್ಕ ಮಕ್ಕಳಾಗಿದ್ದ ಸಮಯದಿನ್ದ್ಲು ಒಳ್ಲೆ ಸ್ನೇಹಿತರು ... ಇಬ್ಬರು ಒಳ್ಳೊಳ್ಳೆ IT companyಗಳಲ್ಲಿ ಇದ್ದು ಕೈ ತುಮ್ಬ ಸಮ್ಬಳ ತರ್ತಾ ಇದ್ರು .... ಇಬ್ರು ವಿಚಾರವಾದಿಗಳು, ಪರಿಸರ ಪ್ರಿಯರು, ಸಮಾಜ ಸೇವೆಯಲ್ಲಿ ಆಸಕ್ಥಿ ಉಳ್ಳವರು ಅಗಿದ್ರು.... ಇದೆಲ್ಲ ಯಾಕೆ ಹೇಳ್ಥಾ ಇದ್ದೀನೀ ಅನ್ದ್ರೆ..ಅವರು ಬೇರೆ ಹುಡುಗರ ತರಹ ಪಾಸ್ಚಮಾತ್ಯ ಸಮ್ಸ್ಕ್ರುತಿಯನ್ನು ಕನ್ದಿದ್ರು ಭಾರತೀಯ ಸಮ್ಸ್ಕ್ರುತಿನ ಪಾಲಿಸ್ತ ಇದ್ರು........
vibrationನಲ್ಲಿ ಇರೊ ರಾಮು ಮೊಬೈಲ್ ಫೊನ್ ಸದ್ದು ಮಾಡಿತು. ’good morning priya' ಅನ್ಥ ಬನ್ದ SMS ನೋಡಿದ ರಾಜೇಶ , ರಾಮು ಪ್ರೀತಿ ಮಾಡ್ಥಾ ಇದ್ದಾನೆ ಅನ್ಥ ಅರ್ಥ ಮಾಡಿಕೊನ್ದ ರಾಜೇಶ, ಸಮಯ ಬನ್ದಾಗ ರಾಮುನೆ ಇದರ ಭ್ಹಗ್ಯೆ ಹೆಳ್ಥಾನೆ ಅನ್ಥ ನಮ್ಬಿಕೆ ಇತ್ತು ಅವನಿಗೆ..
ರಾಜೇಶ ಎಳೊ ಮಗಾ ನಿನ್ನ ಲೊವೆರ್ SMS ಕೂಡ ಬನ್ದಾಯ್ತು . ಇನ್ನಾದ್ರು ಎಳಪ್ಪ
ಮೈಮುರಿಯುತ್ತಾ ರಾಮು ’ ನಿನ್ದೊಳ್ಲೆ ಕಥೆ , ದಿನಾ ಬನ್ದು ಎಳಿಸಿ ತೊನ್ದ್ರೆ ಕೊಡ್ತೀಯ ಮಗಾ ’ ಅದರೆ ಮನಸಿನ ಒಳಗಡೆ ಸ್ನೆಹಿತನ ಮೇಲೆ ಗೌರವವೆ ಇತ್ತು. ಅದರೆ ಹುಸಿಮುನಿಸಿ ತೊರಿಸ್ಥಾ ಇದ್ದ...
ರಾಮು ೬ ಅಡಿಯ ಕಟ್ಟು ಮಸ್ಥಾದ ಹುಡುಗ. ಕರಾಟೆ, ಜ್ಯುಡೊ ಮುನ್ತಾದ ಚಟುವಟಿಕೆಗಳಲ್ಲಿ ತೊಡಿಗಿಸಿಕೊನ್ದಿದ್ದ. ರಾಜೇಶನು ಫ಼ೂಟ್ ಬಾಲ್, ವೊಲ್ಲಿ ಬಾಲ್ ಮುನ್ತಾದಾ ಆಟಗಲಲ್ಲಿ ತೊಡಗಿಕೊನ್ದಿದ್ದ.
ಇನ್ನು ತಡ ಮಾಡಿದರೆ ರಾಜೇಶ ಎನು ಮಾಡ್ಥನೊ ಅನ್ಥ ರಾಮು ಸ್ನಾನದ ಮನೆಗೆ ಹೊರಟ.
ರಾಜೇಶ - ಮಗಾ ನಾನು ಕೆಳಗೆ ಆನ್ಟಿ ಜೊತೆ ಮಾತಾದ್ಥಾ ಇರ್ತೆನೆ, ಬೇಗ ರೆಡಿ ಅಗಿ ಬಾ
ರಾಮು - ಸರಿ ಮಗ, ಗಿವ್ ಮಿ ೧೦ ಮಿನಿಟೆಸ್
ಮಹಡಿ ಇನ್ದ ಕೆಳಗೆ ಇಳಿದ ರಾಜೇಶ , ರಾಮು ಅಮ್ಮ ಸರಸ್ವತಿ ಜೊತೆ ಮಾತುಕತೆಗೆ ಇಳಿದ....
ರಾಜೇಶ - ಆನ್ಟಿ,ಏನು ತಿನ್ಡಿ ಇವತ್ತು
ಸರಸ್ವತಿ - ಪೂರಿ ಸಾಗು, ನಿನ್ಗೆ ಇವಾಗಲೆ ಕೊಡ್ಲೆನೊ, ಅಥವ ಅವನ ಜೊತೆನೆ ತಿನ್ತೀಯ.....
ರಾಜೇಶ - ಅವನು ಬರ್ಲಿ ಆನ್ಟಿ....
ಸರಸ್ವತಿ - ಸರಿನಪ್ಪ
ರಾಜೇಶ - ನಾನು ದಿನಾ ಬನ್ದು ಎಳಿಸೊವರ್ಗೂ ಇವನು ಎಳೊದೆ ಇಲ್ಲವಲ್ಲ ಆನ್ಟಿ. ನನ್ನ ಮದುವೆ ಆದ ಮೇಲೆ ಇವನ ಕಥೆ ಎನು ಆನ್ಟಿ
ಸರಸ್ವತಿ - ಎನಗುತ್ತೆ, ಅವನಿಗು ಮದುವೆ ಮಾಡಿಬಿಡೊಧು, ಆಗ ಅವನ ಹೆನ್ದತಿ ಜವಾಬ್ದಾರಿ....ನೋಡು ಮರ್ತೇ ಬಿಟ್ತೆ ......ನಿಮಮ್ಮ ಜಾನಕಿಗೆ ಹೇಳು ನಾಳೆ ೧೦ ಗನ್ಟೆಗೆ ಹೊರಡೊಣ ನಿನ್ನ ಮದುವೆ ಶೊಪ್ಪಿನ್ಗ್ಗೆ ಅನ್ತ ......... ನಿನ್ನ ಮದುವೆ ಮುಗಿದ ನನ್ತರ ಇವನಿಗು ಮದುವೆ ಮಾಡಿ ಮುಗಿಸಿದ್ರೆ, ನಮಗೂ ನೆಮ್ಮದಿ.....
ರಾಜೇಶ - ಯಾಕೆ ಆನ್ಟಿ, ಅವನಿಗೆ ಒಪ್ಪಿಗೆ ಆಗೊ ಹೆಣ್ಣು ಇನ್ನು ಸಿಕ್ಕಿಲ್ವಾ....
ಅಸ್ಟರಲ್ಲಿ ಒಳಗಡೆ ಪೇಪರ್ ಓದುತ್ತಾ ಇದ್ದ ಸದಾಶಿವ, ಇವರಿಬ್ಬರ ಮಾತುಗಳನ್ನ ಕೇಳಿಸಿಕೊನ್ದು ಹೊರ್ಗಡೆ ಬನ್ದ್ರು...
ಸದಾಶಿವ - ನಮಗು ಇವನು ಒಪ್ಪೊ ತರಹದ ಹೆಣ್ಣನ್ನ ಹುಡುಕಿ ಹುಡುಕಿ ಸಾಕಾಯ್ತು.....
ಸರಸ್ವತಿ ರಾಜೇಶನ ಕಡೆ ತಿರುಗಿ - ನೀನಾದ್ರು ಕೇಳಿ ತಿಳ್ಕೊಪ ಅವನಿಗೆ ಯಾವ ತರಹದ ಹೆಣ್ಣು ಬೇಕು ಅನ್ತ ಅಥವ ಅವನು ಯರನ್ನಾದ್ರು ಇಷ್ಪಪಟ್ಟಿದ್ದಾನ ಹೇಗೇ?
ರಾಜೇಶನಿಗೆ ಪ್ರಾಣ ಸನ್ಕಟ. ಅವನಿಗೆ ರಮು ಮೊಬೈಲ್ ಸುನ್ದರಿ ಭ್ಹಗ್ಯೆ ಗೊತ್ತಿದ್ದರೂ, ರಾಮುನೇ ಹೇಳಲಿ ಅನ್ನೊ ಭಾವನೆ....
ರಾಜೇಶ - ಬಿಡಿ ಆನ್ಟಿ, ಇದನೆಲ್ಲಾ ತಲೆಗೆ ಹಚ್ಹಿಕೊ ಬೇಡಿ.... ಆ ರೀತೀ ಏನಾದರು ಇದ್ದರೇ ಅವನೆ ನಿಮಗೆ ಹೆಲ್ತಾನೆ.... ಸಣ್ಣ ಸನ್ತೊಷದ ವಿಶಯವಿದ್ರು ಅವನು ಹೇಳೊ ಅನ್ತವನು, ಅವನೆನಾದ್ರು ಪ್ರೀತಿಸಿದ್ದರೆ ಹೇಳೇ ಹೇಳ್ತಾನೆ ಆನ್ಟಿ.
ಆಸ್ಟರಲ್ಲಿ ರಾಮು ರೆಡಿ ಆಗಿ ಕೆಳಕ್ಕೆ ದೈನಿನ್ಗ್ ಹಾಲ್ಗೆ ಬನ್ದ...ಸರಸ್ವತಿ, ಸದಾಶಿವ ಮತ್ತು ರಾಜೇಶ ಎಲ್ಲರು ಗಮ್ಭೀರವಾಗಿ ಎನನ್ನೊ ಮಾತಾಡುತಿರುವರಲ್ಲಾ ಅನ್ದು ಕೊನ್ದ.....
ಈಗ ಸುಮ್ಮನಿರೊದೆ ಒಳ್ಳೆದು ಅನ್ದುಕೊನ್ದು - ಅಮ್ಮ, ಬೇಗ ತಿನ್ದಿ ಕೊಡು, ಲೇಟ್ ಆಗ್ತಾ ಇದೆ......
ಸರಸ್ವತಿ - ಬಾರಪ್ಪ ಮಗ ರಾಯ, ಏಳೊದೇ ಲೇಟ್, ಆದರೆ ನಾನು ಲೇಟ್ ಮಾಡ್ತೀನೆ ಅನ್ನುತೀಯ.....ಚೆನ್ದಾಯ್ತು ನೆನು ಹೇಳೋದು
ಸದಾಶಿವ - ರಾಮು ನಿನ್ಗೆ ನೆನ್ನೆ ಹೇಳಿದ ವಿಚಾರದ ಮೇಲೇ ಎನು ಯೊಚನೆ ಮಾಡಿದೆಯಪ್ಪ?
ರಾಮು - ಯೊಚಿಸ್ತಾ ಇದ್ದೀನೆ ಅಣ್ಣಾ... ನನಗೆ ಇನ್ನು ಸ್ವಲ್ಪ ಟೈಮ್ ಕೊಡಿ
ರಾಜೇಶ ರಾಮು ಕಡೆ ನೊಡ್ತಾ , ಅನ್ಕಲ್ ಏನ್ ಹೇಳ್ತಾ ಇದ್ದಾರೆ ಅನ್ತಾ ಕಣ್ಣಲ್ಲೇ ಕೇಳಿದಾ.....ರಾಮು ಆಮೇಲೇ ಹೇಳ್ತೀನೀ ಅನ್ತಾ ಸನ್ನೆ ಮಾಡಿದಾ.... ರಾಜೇಶ ಸುಮ್ಮನಾದ....ಸರಿ ಇಬ್ಬರೊ ತಿನ್ಡಿ ಮುಗಿಸಿ, ಬ್ರು ಕಾಫ್ಹಿ ಕುಡಿದು , ರಾಮುನ ಹೊಸ ನಾನೊ ನಲ್ಲೇ ಓಫಿಸ್ ಗೆ ಹೊರ್ಟ್ರು.......
ರಾಜೇಶ ಮತ್ತು ರಾಮು ITPLನ ಬೇರೇ ಬೇರೇ ಕಮ್ಪನಿಗಳಲ್ಲಿ ಕೆಲಸದಲ್ಲಿ ಇದ್ದರು. ಆದರು ಜೊತೆ ಜೊತೆಯಲ್ಲಿ ಕೆಲಸಕ್ಕೆ ಹೊಗಿ ಬರುತ್ತಾಇದ್ದರು. ಇಬ್ಬರು ಪರಿಸರವಾದಿಗಳು , ಹಾಗಾಗಿ car pooling ಮಾಡ್ತಾ ಇದ್ದರು. ಇದು ಕೂಡ ಬಹುಶ ಅವರಿಬ್ಬರ ಸ್ನೇಹ ಹೆಚ್ಚಿಸಲು ಕಾರಣವಾಯ್ತು ಅನ್ನಿಸುತ್ತೆ. birds of the same feather flock together ಅನ್ನೊ ಮಾತು ಇವರಿಬ್ರ ವಿಶಯದಲ್ಲಿ ಅಕ್ಶರ ಸಹ ಸತ್ಯವಾಗಿತ್ತು.
ವೈಬ್ರಟರ್ ಮೋಡ್ ನಲ್ಲಿದ್ದ ಮೊಬೈಲ್ ಮತ್ತೆ ಸದ್ದು ಮಾಡಿತು. ರಾಜೇಶ್ ಥಟ್ಟನೆ ಫೊನ್ ಎತ್ತಿಕೊನ್ಡಾಗ ರಾಮುಗೆ ಹ್ರುದಯವೇ ಬಾಯಿಗೆ ಬನ್ದನ್ಗಾಯ್ತು . sms ಹೀಗಿತ್ತು ’did u reach office sweet heart. how did your day start '
ರಾಜೇಶ - ಪರ್ವಾಗಿಲ್ಲ ಮಗಾ ....ನಿನ್ನ ಡವ್ವು ನಿನ್ನ ಭಗ್ಯೆ ಪೂರ್ತಿ ಟ್ರಾಕ್ ಇಟ್ಟಿಧಾಳೆ. ಏಸ್ಟೊತ್ತಿಗೆ ಎಲ್ಲಿರ್ತೆಯ ಅನ್ಥಾ ಅವಳಿಗೆ ಗೊತ್ತು.
ರಾಮು - ಅದನ್ನೇ ಮಗಾ ಪ್ರೀತಿ ಅನ್ನೊದು ...ಸರಿ ಸರಿ ನಮ್ಮ ಕೊಮ್ಪನಿ ಬನ್ತು, ಇಲ್ಲೇ ಡ್ರೊಪ್ ಮಾಡು ಮಗಾ...
ರಾಜೇಶ - ಸರಿ ಕಣೊ ( ಕಣ್ಣನ್ನು ಮಿಟಿಕಿಸುತ್ತಾ) enjoy
ರಾಜೇಶ ಇಳಿದು , ತನ್ನ ಕಛೇರಿಗೆ ಹೋದ. ರಾಮು ತನ್ನ ಕಛೇರಿಯ ಕಾರ್ ಪಾರ್ಕಿನ್ಗ್ ಲಾಟ್ ನಲ್ಲಿ ಕಾರ್ ಅನ್ನು ಪಾರ್ಕ್ ಮಾಡಿ, ತನ್ನ ಕಮ್ಪ್ಯುಟ್ರ್ ಆನ್ ಮಾಡಿ ತನ್ನ ಕೆಲಸದಲ್ಲಿ ತೊಡಗಿದ.
IT ಇನ್ಡುಸ್ತ್ರಿ ಅವರುಗಳ ಬಾಳೇ ಹಾಗೆ, ಒಮ್ಮೆ ಕಛೇರಿ ಒಳಹೊಕ್ಕರೆ ಮುಗೀತು, ಹೊರಗಿನ ಪ್ರಪನ್ಚವೆ ಮರೆತು ಹೋಗುತ್ತೆ. clients, co-workers, meeting, KT ಅದೂ ಇದೂ ಅನ್ತ ಸಮಯ ಹೋಗೋದೆ ತಿಳಿಯೊದಿಲ್ಲಾ. ಅವರ ಪ್ರಪನ್ಚ ತುಮ್ಬ ಚಿಕ್ಕದು. ಆದಿನ ಹಾಗೆಯೆ ಆಯಿತು.
ಮಧ್ಯನ್ಹ ೧ ಗನ್ಟೆಗೆ , ಮತ್ತೊನ್ದು sms ಬನ್ತು. ಮೈಸಝ್ ಹೀಗಿತ್ತು ’ಊಟ ಮಾಡಿದೆಯಾ ಚಿನ್ನು, ಸನ್ಜೆ ಸಿಗ್ತಾ ಇದ್ದಿಯಾ ತಾನೆ, ೪ ದಿನಾ ಅಯ್ತು ನಿನ್ನ ಮೀಟ್ ಮಾಡಿ. ಮಿಸ್ ಮಾಡ್ಬೆಡ ಪ್ಲೀಸ್. ರಾಮು ಅದಕ್ಕೆ ’ ಚ್ಹಿನ್ತೆ ಮಾಡ್ಬೆಡ ಚಿನ್ನ, ರಾಜೇಶನ್ನ ಮನೆಗೆ ಡ್ರೊಪ್ ಮಾಡಿ, ರಾತ್ರಿ ೯ ಗನ್ಟೆಗೆ ಅದೇ ನಮ್ಮ ರೆಗ್ಯುಲರ್ ಜಾಗದಲ್ಲೆ ಮೀಟ್ ಮಾಡೊಣ. ;) ಬೇರೇ ಏನಾದ್ರು ಪ್ಲಾನ್ ಇದೆಯಾ ’ ಅನ್ತಾ ರಿಪ್ಲೈ ಮಾಡಿದ. ನನ್ತರದ ನಿಮಿಷದಲ್ಲೇ ’ ಬೇರೇ ಏನು ಇಲ್ಲಾ, ಜುಸ್ಟ್ ನಿನ್ನ ಮೀಟ್ ಮಾಡ್ ಬೇಕು, ಮಾತಾಡ್ ಬೇಕು ಅಸ್ಟೇ ’ ಅನ್ನೊ ಮೈಸಘ್ ಬನ್ತು.
ಈ ಸಮಯದಲ್ಲೆ ರಾಜೇಶ ಕರೆ ಮಾಡಿ ಊಟಕ್ಕೆ ಹೋಗೋಣ ಬಾ ಅನ್ತ ಹೇಳಿದ. . ಸರಿ ಸ್ವೀಟುಗೆ ಆಮೇಲೆ ರಿಪ್ಲೈ ಮಾಡೊಣ ಅನ್ಥ ಯೊಚಿಸಿ, ರಾಜೇಶನ ಹತ್ತಿರಕ್ಕೆ ಹೊರ್ಟ.
ಲನ್ಚ್ ಮುಗಿಸಿ ಬನ್ದ ರಾಮು ’ಖ್ಹನ್ಡಿತಾ , ನಿನ್ನ ನೋಡೋ , ಮಾತಾಡಿಸೋ ಆಸೇ ನನ್ಗೆ ಇಲ್ಲವ. coming saturdayಗೆ ನಾವು ಭ್ಹೇಟಿ ಮಾಡಿ ೪ ವರ್ಷ್ ಆಯ್ತು. ವಾರ್ಷಿಕೊತ್ಸವದ ಗಿಫ಼್ತ್ ಏನು ಕೊಡ್ತೀಯ? ’ ಅನ್ಥ ರಿಪ್ಲೈ ಮಾಡಿದ. ’ ಒನ್ದು ಮುತ್ತು ಕೊಡ್ತೆನೆ ಬಾ ;) ’ ಅನ್ತ ರಿಪ್ಲೈ ಬನ್ತು. ’ ಕೋಡಲಿಲ್ಲ ಅನ್ದ್ರೆ ಬಿಡೋರು ಯಾರು, ಸರಿ ಈಗ ಕೆಲಸ ಮುಗಿಸಿ ಆಮೇಲೆ ನಿನ್ಗೆ ಕಾಲ್ ಮಾಡ್ತೀನಿ’ ಅನ್ತ ರಾಮು ರಿಪ್ಲೈ ಮಾಡಿ ತನ್ನ ಕೆಲಸದಲ್ಲಿ ತೊಡಗಿದ.
ಸನ್ಜೆ ರಾಜೇಶ ೬ಕ್ಕೆ ಕರೆ ಮಾಡಿ ಹೋರಡೊನ್ವ ಅನ್ತ ಹೇಳಿದ. ರಾಮು ತನ್ನೆಲ್ಲಾ ಕೆಲಸವನ್ನು ಒನ್ದು ಹನ್ತಕ್ಕೆ ತನ್ದಿಟ್ಟು , ನಾಳೆ ಮಾಡಬೇಕಾದಾ ಕೆಲಸದ ಲಿಸ್ಟ್ ಮಾಡಿ , ಸಿಸ್ಟಮ್ ಅನ್ನು ಲೊಗ್ ಓಫ಼್ ಮಾಡಿ ರಾಜೇಶನಿಗೆ ಮಿಸ್ಸ್ ಕಾಲ್ ಕೋಟು ಕಛೇರಿ ಇನ್ದ ಹೊರಟನು. ರಾಜೇಶನನ್ನು ಪಿಕ್ ಉಪ್ ಮಾಡಿ ITPL ಇನ್ದಾ ಹೋರಟನು. ಸ್ವಲ್ಪ ದೂರ ಹೋರಟ ಮೇಲೇ ರಾಜೇಶ ರಾಮು ಗೆಲುವಿನಿನ್ದಾ ಇರುವುದನ್ನು ಗಮನಿಸಿದ.
ರಾಜೇಶ - ಏನ್ ಮಗಾ ಫ಼ುಲ್ಲು ಖ್ಹುಷ್ ಆಗಿದ್ಯ.... ಏನ್ ವಿಷೇಶ ನಮಗೂ ಹೇಳಪ್ಪ
ಯಾವುದೋ ಲೋಕದಲ್ಲಿ ಇದ್ದ ರಾಮು - ಅಹ್ ಹ ಏನು ಇಲ್ಲಪ್ಪ.... ಹಾಗೆ ಏನು ಇಲ್ಲಾ ಮಗಾ....ನೀನು ಸುಮ್ಮನೆ ಇರೊದಿಲ್ಲವಲ್ಲ... ನನ್ನ ಕಾಲು ಎಳಿತಾ ಇರ್ತೀಯಾ ಯಾವಾಗ್ಲು ಅನ್ಥ ಹುಸಿ ಮುನಿಸು ಮುನಿದು ಹೇಳಿದ.
ರಾಜೇಶ ಹುಸಿ ಕೋಪದಿನ್ದ - ಸರಿ ಬಿಡೊ ಕೇಳೊಲ್ಲ..... ಮದುವೆ ಮಾಡ್ಕೊನ್ಡಾಗಾ ತಾನಾಗೆ ಗೊತ್ತಗುತ್ತೆ.
ರಾಮು - ಹಹಹಹ.. ಸರಿ ಸರಿ ಆಗಲೆ ಗೊತ್ತಗುತ್ತೆ ಬಿಡಿ ( ನಕ್ಕರು ಮನಸಿನಲ್ಲಿ ರಾಜೇಶ ಹೇಳಿದ ಹಾಗೆ ಜೀವನದಲ್ಲಿ ನಡೆಯಲಿ ದೇವರೆ ಅನ್ದು ಕೊನ್ಡ) .
ರಾಮು ರಾಜೇಶನ್ನ ಮನೆಗೆ ಡ್ರಾಪ್ ಮಾಡಿ, ತನ್ನ ಮನೆಗೆ ಹೊರಟು ಮುಖ್ಹ ತೊಳೆದು, ಡ್ರೆಸ್ ಬದಲಿಸಿದ. ಶೊರ್ಟ್ cream ಕುರ್ತಾ, white cotton ಪ್ಯಾನ್ಟ್ ಧರಿಸಿದ. ಅಮ್ಮ ಕೊಟ್ಟ ಬಿಸಿ ಬಿಸಿ ದೊಸೆ ತಿನ್ದು ಹೊರಡುವಶ್ಟರಲ್ಲೇ ೩-೪ ಮಿಸ್ ಕಾಲ್ಸ್ ಬನ್ದಿತ್ತು. ಮಗ ತಿನ್ಡಿ ತಿನ್ನುವುದರಲ್ಲಿ ಮಗ್ನ, ಅದರೆ ಸರಸ್ವತಿಗೆ ಮಗನಲ್ಲಿ ನಡೆದಿದ್ದ ಬದಲಾವಣೆಯನ್ನು ಗಮನಿಸುವುದರಲ್ಲಿ ಮಗ್ನಳು.
Subscribe to:
Post Comments (Atom)
No comments:
Post a Comment