Thursday, December 24, 2009

ಸತ್ಯಂ ಜೊತಿಗಿನ ಕೊನೇ ದಿನಗಳು - ಬಾಗ ೨

ನನ್ನ ತಾಳ್ಮೆ ಸೆಪ್ಟೆಂಬರ್ ೩೦ಕ್ಕೆ ಮುಗಿದು ಹೋಯ್ತು ... ಸಂಬಂದ ಪಟ್ಟವರೆನೆಲ್ಲಾ ಕೇಳಿಆಗಿತ್ತು... ಆದರೆ ಯಾರು ನನ್ನ ವೀಸಾ ಉಳಿಸಿ ಕೊಡಲು ಆಸಕ್ತಿ ತೋರಿಸಲಿಲ್ಲ... ನನ್ನ ವೃತ್ತಿಗೆ ಯಾವಾಗ ಇವರು ಬೆಲೆ ಕೊಡಲು ಹಿಂಜರಿದರು, ಅಳಿದುಳಿದ ಇವರ ಮೇಲಿದ್ದ ಗೌರವ ಮಣ್ಣಲ್ಲಿ ಮಣ್ಣಾಗಿ ಹೋಯ್ತು.. ಅಕ್ಟೋಬರ್ ೬ಕ್ಕೆ ನನ್ನ ಮೇಲಧಿಕಾರಿಯ ಮೇಲಧಿಕಾರಿಯ ಮೆಲಾಧಿಕರಿಯನ್ನ ನೋಡಿ ನನ್ನ ಮನಸಿನಲ್ಲಿದ್ದ ಭಾವನೆ ಹೇಳಿಕೊಂಡಿದ್ದೆ.. ಅವರು ವೀಸಾ ಮುಂದುವರಿಸುವ ಭಾಷೆ ಇತ್ತರು... ಆದರೆ ನಂಗೆ ತಿಳಿಯದ ವಿಷಯ ಇದಾಗಿತ್ತು.. ವೀಸಾ ಮುಗಿಯುವ ಮುಂಚಿಯೇ ಏಕೆ ಇವರು ಮಾಡಲಿಲ್ಲ.. ಈಗ ಮಾಡುವೆ ಎಂದು ಹೇಳುತ್ತಿರುವುದು ಇನ್ನೊಂದು ಮೊಸವೋ ? ... ನನ್ನ ಒಳ್ಳೆಯ ಕಾರ್ಯಗಳ ಬಳುವಳಿಯೂ ಅನ್ನುವಂತೆ ಒಳ್ಳೆಯ ಕಂಪನಿಯ ಕೆಲಸ ದೊರಕಿತ್ತು ... ಅಕ್ಟೋಬರ್ ೧೭ ನೆ ತಾರಿಕ್ಕು ದೀಪಾವಳಿ.. ಅಪ್ಪ ಅಮ್ಮನ ಮುಂದೆ ಸತ್ಯಂ ಗೆ ರಾಜಿನಾಮೆ ಕೊಟ್ಟೆ ... ಕೊಡುವಾಗಲು ಒಂದು ತರಹದ ನೋವು ... ಇವರು ನನ್ನ ಕೆರೀಯರ್ ಭಗ್ಯೆ ಆಸಕ್ತಿ ವಹಿಸಿದ್ದರೆ ನಾನು ಈ ಕಂಪನಿಯನ್ನ ಬಿಡುವ ಪ್ರಸಂಗವೇ ಬರುತಿರಲಿಲ್ಲವಲ್ಲ ಅಂತ.. ಆದರೆ ಆಗುವುದೆಲ್ಲ ಒಳ್ಳೆಯದಕ್ಕೆ ತಾನೇ..

ನನ್ನ ಮ್ಯಾನೇಜರ್ ೨ ತಿಂಗಳಿಗಿಂತ ಒಂದ್ ದಿನ ಕೂಡ ಬಿಡುವುದಿಲ್ಲ ಅಂತ ಹಟವಿಡಿದ... ಸರಿ ವಿಷ ಕ್ರಿಮಿಗಲೊಡನೆ ಜಗಳುವು ಬೇಡ ಎಂದು ಹೊಸ ಕಂಪನಿಯಿಂದ ಒಪ್ಪಿಗೆ ಪಡೆದೆ ..

ಕೊನೆಯ ದಿನದ ವರೆವಿಗೂ ಇವರು ಬದಲಾವಣೆಯ ಸೂಚನೆ ಕೂಡ ತೋರಲಿಲ್ಲ ... ಮಾಡುತಿದ್ದ ತಪ್ಪುಗಳು ಹಾಗೆಯೇ ನಡೆದಿತ್ತು.. ಟೀಂ ನಲ್ಲಿ ಇದ್ದ ಎಲ್ಲರು ಬಿಡುವ ಮನಸನ್ನು ಮಾಡಿದ್ದರು .. ಹೀಗೆ ಸಾಗಿತ್ತು ಅಲ್ಲಿಯ ಸ್ಥಿತಿ .. ಕೇಳಿದ ಮಾತಿನ ಪ್ರಕಾರ ದಿನಕ್ಕೆ ೫೦ ಜನ ರಾಜಿನಾಮೆ ಕೊಡುತಿದ್ದರು ಅಂತ..

ಇದೆನೆಲ್ಲ ನಾನು... ನಾನು ಸರಿ.. ಅವರು ತಪ್ಪು ಅಂತ ಹೇಳೋದಕ್ಕೆ ಉಪಯೋಗಿಸಿಕೊಲ್ಲುತಿಲ್ಲ... ನಾನು ಹೀಗೆ ಭಾವಿಸಿದೆ ಅಂತ ಹೇಳೋಕೆ ಮಾತ್ರ ಉಪಯೋಗಿಸಿಕೊಲ್ಥಾ ಇದ್ಹೇನೆ ಅಸ್ಟೇ ... ನಾನು ಅಂದುಕೊಂದಿರುವುದು ತಪ್ಪಾಗಿಕೂದ ಇರಬಹುದು ... ಆದರೆ ಇದು ನನ್ನ ಅನಸಿಕೆ.. ಹೇಳುವ ಹಕ್ಕು ನಂಗೆ ಇದೆ... ತಪ್ಪಾಗಿದ್ದರೆ ತಿದ್ದುವ ಹಕ್ಕು ನಿಮಗಿದೆ...

ಕೊನೆಯ ದಿನ ಹೊಸ ಮದುವನಗಿತ್ತಿಯ ಮನಸ್ಸು ಹೇಗಿ ಇರುತ್ತೋ ಹಾಗಿ ಇತ್ತು ಅಂತ ನಂಗೆ ಅನ್ನಿಸುತ್ತು... ಹುಟ್ಟಿ ಬೆಳೆದ ಮೆನೆ ಬಿಟ್ಟು ಹೊಸದಾಗಿ ಮದುವೆಯಾಗಿ ಗಂಡನ ಮನೆ ಬಿಡು ವಾಗ ಹೇಗೆ ಅನ್ನಿಸುತ್ತೋ ಹಾಗೆ.... ದುಃಖ ಸುಖ ಎರಡು ಒಟ್ಟಿಗೆ ಸಮವಾಗಿ... ನಿಮಿಷ ನಿಮಿಷವೂ ಭಾರವಾಗಿತ್ತು.. ಬೈ ಬೈ ಇಮೇಲ್ ಕಲಿಸಿದೆ.. ಟೀಂ ಜೊತೆ ಮಾತಾಡಿದೆ... ವೃತ್ತಿ ಜೀವನದಲ್ಲಿ ಯಾರ್ಯಾರ್ ಜೊತೆ ಕೆಲಸ ಮಾಡಿದ್ದೇನೋ , ಅವರೆಲ್ಲರೂ ಅದೇ ಆಫೀಸ್ ನಲ್ಲಿ ಇದ್ದಲ್ಲಿ ಅವರನ್ನ ಸಂಧಿಸಿ ನಾನು ಹೊರದುತ್ತಿರುವುದಾಗಿ ಹೇಳಿದೆ, ಅವರಿಗೆ ಶುಭ ಹಾರೈಸಿ ಬಂದೆ.. ಮಲ್ಲಿಕ್ ನ ಸಂಧಿಸಿ ನಂಗೆ ಅನ್ನಿಸಿದ ಅನಿಸಿಕೆ ಯನ್ನ ನಿರ್ಬೀತಿ ಇಂದ ಹೇಳಿ ಮನಸನ್ನ ತಿಳಿ ಮಾಡಿಕೊಂಡೆ.. ಜೀತು ಗೆ ಓದಿ ಒಳ್ಳೆ ಕಡೆ ಕೆಲಸ ಹಿಡಿಯಲು ಹೇಳಿದೆ.. ನನ್ನ ಟೀಂ ನವರು ಸೆಂಡ್ ಆಫ ಇತ್ತರು.. ಕೊನೆಯಲ್ಲಿ ಅಳು ಬರುವ ಹಾಗೆ ಆಯ್ತು... ತಡೆದೆ..

೫.೩೦ಕ್ಕೆ ನನ್ನ ಎಂಪ್ಲೋಯೀ ಕಾರ್ಡ್ ರಿಟರ್ನ್ ಮಾಡಿದೆ .. ಬ್ಯಾಗ್ ತೆಗೆದು ಕೊಂದು, ಕೊನೆ ಸಲ ಕಂಪನಿ ಇಂದ ಹೊರಗಡೆ ಬಂದು ಇನ್ನೆಂದು ಬರುವಹಗಿಲ್ಲವಲ್ಲ ಅಂತ ನೋಡು, ಹೊಸ ಕಂಪನಿ ಜನ ನನ್ನ ವೃತ್ತಿಯ ಮುಂದಿನ ಭಾಗ, ಸುಗಮವಾಗಲಿ ಎಂದುಕೊಂಡು ಮನೆಯ ಕಡೆ ಹೊರಟೆ

ನಾಡಿದ್ದು ಮತ್ತೊಂದು ಕಂಪನಿ, ಹೊಸ ಜನ , ಹೇಗೆ ಇರುವುದು ಎಂತೋ ಅನ್ನುವ ಕುತೂಹಲ ... ಗೊತ್ತಗುವುದು ಬಿಡಿ ಶೀಗ್ರದಲ್ಲೇ

ಸತ್ಯಂ ಜೊತಿಗಿನ ಕೊನೇ ದಿನಗಳು - ಬಾಗ ೧

ಇದನ್ನ ಹೇಗೆ ಬರೀಬೇಕು ಅಂತಲೇ ನಂಗೆ ಗೊತ್ತಾಗುತ್ತಿಲ್ಲ
ನಾನು ಯಾವತ್ತು ಈ ಕಂಪನಿ ನ ಬಿಡುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಆದರೆ ನನ್ನ ವಯಕ್ತಿಕ ಹಾಗು ನನ್ನ ಔದ್ಯೋಗಿಕ ಜೀವನಕ್ಕೆ ಸಹಕಾರಿ ಆಗಿ ಇರಲಿಲ್ಲ... ಎಲ್ಲರು ಹೀಗೆ ಹೇಳುತ್ತಾರೆ ಅಂತಾ ನೀವು ಅಂದ್ಕೊತಿರ್ಬೇಕು.. ನಾನು ಯಾರಿಗೂ ನಾನು ಮಾಡಿದ್ದು ಸರಿ ಅಂತ ವಾದಿಸ್ತಾ ಇಲ್ಲ ಅಥವಾ ನಾನು ತೆಗೆದು ಕೊಂಡ ನಿರ್ಧಾರಕ್ಕೆ ಸಮಜ್ಹೈಸಿ ಕೊಡ್ತಾ ಇಲ್ಲ... ಇದು ನಾನು ಅನುಭವಿಸಿದ ಭಾವನೆಗಳನ್ನ ಒಂದೆಡೆ ಬರಿದಿದೋ ಆಸೆ ಅಸ್ಟೇ .

ಜನವರಿ ೨೦೦೯ ಶುರುವಾಗಿದ್ದೆ ನೋವಿನಿಂದ .. ಅವಮಾನ ಯಾರು ಮಾಡದಿದ್ದರೂ ನಾವು ಇಲ್ಲ್ಲಿ ಕೆಲಸ ಮಾಡುವುದು ಉತ್ತಮವೋ ಅಲ್ಲವೋ ಅಂತ ಯೋಚಿಸೋದಕ್ಕೆ ಶುರು ಮಾಡಿದ್ದಂತೂ ನಿಜ .. ನಮ್ಮ ಕಂಪನಿಯ ಉಪಯೋಗ ಪಡೆದು ಕೊಲ್ಲುತಿರುವ ಕಂಪನಿ ನಮಗೆ ನಾನ ತರಹದ ಸೂಚನೆಗಳನ್ನ ಕೊಡುತ್ತಲೇ ಇತ್ತು, ನಾವು ಹೋರದ ಬಹುದು ಅಂತ ನಿರ್ಧರವಗ್ತ್ತು ಆಗಲೇ.. ಆದರೆ ಯಾವ ಮೂಲ ಕಾರಣ ದಿಂದ ನಾವು ಈ ಸ್ಥಿತಿ ತಲುಪಿದ್ದವೋ ಆ ಕಾರಣ ಹಾಗೆಯೇ ಉಳಿದಿತ್ತು .. ಅದನ್ನ ಸರಿಪಡಿಸುವ ಗೋಜಿಗೆ ಯಾರು ಹೋಗಲೇ ಇಲ್ಲ... ಬುದ್ದಿವಂತರು ಅಲ್ಲಿಯೇ ನಮ್ಮ ಕಂಪನಿ ತೊರೆದು ಬೇರೆಡೆಗೆ ಹೋದರು, ಇನ್ನು ಕೆಲವರು ಅಲ್ಲೆಯೇ ಕೆಲಸ ಹುಡುಕಿ , ಕೆಲಸ ಸಿಗದೇ (recession impact) , ನಮ್ಮ ಕಂಪನಿ ನಮಗೆ ಅನ್ಯಾಯ ಮಾಡದು ಎಂದು ನಂಬಿ ಬಂದೆವು... ಅಲ್ಲಿಯೇ ಇರಬೇಕು ಎಂಬ ಆಸೆಗೆ ತಣ್ಣೀರು ಎರದಾಗಿತ್ತು

ಭಾರತ ನಮ್ಮ ದೇಶ, ಆದರೆ ಅಮೆರಿಕ ನಲ್ಲಿ ಇರ್ಬೇಕು ಅನ್ನೋ ಆಸೆ ತೀರೋ ಮುಂಚೆ ನಮನ್ನ ನಮ್ಮ ಕಂಪನಿ ತಪ್ಪುಗಳಿಂದ ಹೊರದೊದಿಸ್ಸಿದರು ... ಅಲ್ಲಿ ನಮ್ಮ ಕ್ಲೈಂಟ್ ನಮ್ಮನ್ನ ಕರೆದು ನೀವು ನಮ್ಮೊಡನೆ ಕೆಲಸ ಮಾಡಲಾರಿರಿ ಅಂತ ಹೇಳಿದ ದಿನ ಕ್ಷಣ ನೆನೆದು ಮನಸ್ಸು ನೊಂದಿತ್ತು.. ಆದರೆ ಭಾರತ ದಲ್ಲಿ ಪರಿಸ್ಥಿತಿ ಬೇರಿತ್ತು ....
ನನ್ನ ಹಳೆಯ ಮೇಲಾಧಿಕಾರಿ ಈಗ ಒಂದು ದೊಡ್ಡ ಹುದ್ದೆಯಲ್ಲಿ ಇದ್ದರು... ಅವರೊಡನೆ ನನಗೆ ಅಂತ ಒಳ್ಳೆ ಸಂಬಂಧ ಇಲ್ಲ ದಿದ್ದರು , ಮತ್ತೊಮ್ಮೆ ನಂಬೋಣ, ನಂಬಿಕೆ ಇಲ್ಲದಯೇ ಇಲ್ಲಿ ಸಾಧ್ಯವೇ ಎಂದುಕೊಂಡು, ಅವರು ಕೆರೆದು ತೋರಿಸಿದ ಪ್ರಾಜೆಕ್ಟ್ ಗೆ ಸೇರಿದೆ.. ಅಲ್ಲಿಯ ಅವ್ಯವಸ್ಥೆ ನೋಡಿ ದುಖವಾಯಿತು, ಆದರೆ ಅದನ್ನ ಸರಿಪದಿಸೋ ಮನಸ್ಸು ಇತ್ತು.. ನನ್ನ ಮೇಲ್ವಿಚರಕರಿಗೆ ನನ್ನ ಅನಿಸಿಕೆಗಳನ್ನು ಹೇಳಿದ್ದೆ, ಅದಕ್ಕೆ ಅವರ ಸಹಕಾರವನ್ನು ಕೇಳಿದ್ದೆ.. ಆದರೆ ನಿಜದ ಕಥೆ ನಂಗೆ ಬಹಳ ತಡವಾಗಿ ತಿಳಿದಿತ್ತು.. ಅಲ್ಲಿ ನನ್ನನ್ನ ಉಪಯೋಗಿಸಿಕೊಲ್ಲಲಾಗಿತ್ತು ... ಯಾವುದು ನಂಗೆ ಅಲ್ಲಿ ತಪ್ಪು ಅನ್ನಿಸಿತ್ತು ಅದಕ್ಕೆ ನೀರು ಎರೆಯುತ್ತಿದರು ... ಒಂದು ವಿಧದಲ್ಲಿ ನೀನು ಇಲ್ಲಿ ಬೇಕಾಗಿಲ್ಲ ಅಂದು ನೇರವಾಗಿ ಹೇಳದೆ ಸುತ್ತಿ ಬಳಸಿ ಹೇಳುತ್ತಿದರ್ಎ ಅನ್ನಿಸಿತ್ತು... ನನ್ನ ಒದ್ಯೋಗಿಕ ಜೀವನಕ್ಕೆ ಪ್ರತಿಕೂಲವಾಗಿ ಇದೆ ಅನ್ನಿಸಿತ್ತು

ಮೊದಲ ಪ್ರಯತ್ನ ಫಲಕಾರಿಆಗಿತ್ತು , ಇನ್ನು ಒಮ್ಮೆ ಇವರ ಮನಸ್ಥಿತಿ ಬದಲಾಯಿಸುವುದೇ ಒಮ್ಮೆ ನೋಡಿಯೇ ಬಿಡೋಣ ವೆಂದು ನನ್ನ ಮೆಲಾಧಿಕರಿಗೆ ಹೇಳಿದೆ...ಅದಕ್ಕೆ ಬಂದ ಉತ್ತರ... ಒಳ್ಳೆಯ ಕೆಲಸ ಸಿಕ್ಕರೆ ಬಿಟ್ಟು ಬಿಡು ಇದನ್ನ ಅನ್ನೋ ಬಿಟ್ತ ಸಲಹೆ ...