ಇದನ್ನ ಹೇಗೆ ಬರೀಬೇಕು ಅಂತಲೇ ನಂಗೆ ಗೊತ್ತಾಗುತ್ತಿಲ್ಲ
ನಾನು ಯಾವತ್ತು ಈ ಕಂಪನಿ ನ ಬಿಡುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಆದರೆ ನನ್ನ ವಯಕ್ತಿಕ ಹಾಗು ನನ್ನ ಔದ್ಯೋಗಿಕ ಜೀವನಕ್ಕೆ ಸಹಕಾರಿ ಆಗಿ ಇರಲಿಲ್ಲ... ಎಲ್ಲರು ಹೀಗೆ ಹೇಳುತ್ತಾರೆ ಅಂತಾ ನೀವು ಅಂದ್ಕೊತಿರ್ಬೇಕು.. ನಾನು ಯಾರಿಗೂ ನಾನು ಮಾಡಿದ್ದು ಸರಿ ಅಂತ ವಾದಿಸ್ತಾ ಇಲ್ಲ ಅಥವಾ ನಾನು ತೆಗೆದು ಕೊಂಡ ನಿರ್ಧಾರಕ್ಕೆ ಸಮಜ್ಹೈಸಿ ಕೊಡ್ತಾ ಇಲ್ಲ... ಇದು ನಾನು ಅನುಭವಿಸಿದ ಭಾವನೆಗಳನ್ನ ಒಂದೆಡೆ ಬರಿದಿದೋ ಆಸೆ ಅಸ್ಟೇ .
ಜನವರಿ ೨೦೦೯ ಶುರುವಾಗಿದ್ದೆ ನೋವಿನಿಂದ .. ಅವಮಾನ ಯಾರು ಮಾಡದಿದ್ದರೂ ನಾವು ಇಲ್ಲ್ಲಿ ಕೆಲಸ ಮಾಡುವುದು ಉತ್ತಮವೋ ಅಲ್ಲವೋ ಅಂತ ಯೋಚಿಸೋದಕ್ಕೆ ಶುರು ಮಾಡಿದ್ದಂತೂ ನಿಜ .. ನಮ್ಮ ಕಂಪನಿಯ ಉಪಯೋಗ ಪಡೆದು ಕೊಲ್ಲುತಿರುವ ಕಂಪನಿ ನಮಗೆ ನಾನ ತರಹದ ಸೂಚನೆಗಳನ್ನ ಕೊಡುತ್ತಲೇ ಇತ್ತು, ನಾವು ಹೋರದ ಬಹುದು ಅಂತ ನಿರ್ಧರವಗ್ತ್ತು ಆಗಲೇ.. ಆದರೆ ಯಾವ ಮೂಲ ಕಾರಣ ದಿಂದ ನಾವು ಈ ಸ್ಥಿತಿ ತಲುಪಿದ್ದವೋ ಆ ಕಾರಣ ಹಾಗೆಯೇ ಉಳಿದಿತ್ತು .. ಅದನ್ನ ಸರಿಪಡಿಸುವ ಗೋಜಿಗೆ ಯಾರು ಹೋಗಲೇ ಇಲ್ಲ... ಬುದ್ದಿವಂತರು ಅಲ್ಲಿಯೇ ನಮ್ಮ ಕಂಪನಿ ತೊರೆದು ಬೇರೆಡೆಗೆ ಹೋದರು, ಇನ್ನು ಕೆಲವರು ಅಲ್ಲೆಯೇ ಕೆಲಸ ಹುಡುಕಿ , ಕೆಲಸ ಸಿಗದೇ (recession impact) , ನಮ್ಮ ಕಂಪನಿ ನಮಗೆ ಅನ್ಯಾಯ ಮಾಡದು ಎಂದು ನಂಬಿ ಬಂದೆವು... ಅಲ್ಲಿಯೇ ಇರಬೇಕು ಎಂಬ ಆಸೆಗೆ ತಣ್ಣೀರು ಎರದಾಗಿತ್ತು
ಭಾರತ ನಮ್ಮ ದೇಶ, ಆದರೆ ಅಮೆರಿಕ ನಲ್ಲಿ ಇರ್ಬೇಕು ಅನ್ನೋ ಆಸೆ ತೀರೋ ಮುಂಚೆ ನಮನ್ನ ನಮ್ಮ ಕಂಪನಿ ತಪ್ಪುಗಳಿಂದ ಹೊರದೊದಿಸ್ಸಿದರು ... ಅಲ್ಲಿ ನಮ್ಮ ಕ್ಲೈಂಟ್ ನಮ್ಮನ್ನ ಕರೆದು ನೀವು ನಮ್ಮೊಡನೆ ಕೆಲಸ ಮಾಡಲಾರಿರಿ ಅಂತ ಹೇಳಿದ ದಿನ ಕ್ಷಣ ನೆನೆದು ಮನಸ್ಸು ನೊಂದಿತ್ತು.. ಆದರೆ ಭಾರತ ದಲ್ಲಿ ಪರಿಸ್ಥಿತಿ ಬೇರಿತ್ತು ....
ನನ್ನ ಹಳೆಯ ಮೇಲಾಧಿಕಾರಿ ಈಗ ಒಂದು ದೊಡ್ಡ ಹುದ್ದೆಯಲ್ಲಿ ಇದ್ದರು... ಅವರೊಡನೆ ನನಗೆ ಅಂತ ಒಳ್ಳೆ ಸಂಬಂಧ ಇಲ್ಲ ದಿದ್ದರು , ಮತ್ತೊಮ್ಮೆ ನಂಬೋಣ, ನಂಬಿಕೆ ಇಲ್ಲದಯೇ ಇಲ್ಲಿ ಸಾಧ್ಯವೇ ಎಂದುಕೊಂಡು, ಅವರು ಕೆರೆದು ತೋರಿಸಿದ ಪ್ರಾಜೆಕ್ಟ್ ಗೆ ಸೇರಿದೆ.. ಅಲ್ಲಿಯ ಅವ್ಯವಸ್ಥೆ ನೋಡಿ ದುಖವಾಯಿತು, ಆದರೆ ಅದನ್ನ ಸರಿಪದಿಸೋ ಮನಸ್ಸು ಇತ್ತು.. ನನ್ನ ಮೇಲ್ವಿಚರಕರಿಗೆ ನನ್ನ ಅನಿಸಿಕೆಗಳನ್ನು ಹೇಳಿದ್ದೆ, ಅದಕ್ಕೆ ಅವರ ಸಹಕಾರವನ್ನು ಕೇಳಿದ್ದೆ.. ಆದರೆ ನಿಜದ ಕಥೆ ನಂಗೆ ಬಹಳ ತಡವಾಗಿ ತಿಳಿದಿತ್ತು.. ಅಲ್ಲಿ ನನ್ನನ್ನ ಉಪಯೋಗಿಸಿಕೊಲ್ಲಲಾಗಿತ್ತು ... ಯಾವುದು ನಂಗೆ ಅಲ್ಲಿ ತಪ್ಪು ಅನ್ನಿಸಿತ್ತು ಅದಕ್ಕೆ ನೀರು ಎರೆಯುತ್ತಿದರು ... ಒಂದು ವಿಧದಲ್ಲಿ ನೀನು ಇಲ್ಲಿ ಬೇಕಾಗಿಲ್ಲ ಅಂದು ನೇರವಾಗಿ ಹೇಳದೆ ಸುತ್ತಿ ಬಳಸಿ ಹೇಳುತ್ತಿದರ್ಎ ಅನ್ನಿಸಿತ್ತು... ನನ್ನ ಒದ್ಯೋಗಿಕ ಜೀವನಕ್ಕೆ ಪ್ರತಿಕೂಲವಾಗಿ ಇದೆ ಅನ್ನಿಸಿತ್ತು
ಮೊದಲ ಪ್ರಯತ್ನ ಫಲಕಾರಿಆಗಿತ್ತು , ಇನ್ನು ಒಮ್ಮೆ ಇವರ ಮನಸ್ಥಿತಿ ಬದಲಾಯಿಸುವುದೇ ಒಮ್ಮೆ ನೋಡಿಯೇ ಬಿಡೋಣ ವೆಂದು ನನ್ನ ಮೆಲಾಧಿಕರಿಗೆ ಹೇಳಿದೆ...ಅದಕ್ಕೆ ಬಂದ ಉತ್ತರ... ಒಳ್ಳೆಯ ಕೆಲಸ ಸಿಕ್ಕರೆ ಬಿಟ್ಟು ಬಿಡು ಇದನ್ನ ಅನ್ನೋ ಬಿಟ್ತ ಸಲಹೆ ...
Subscribe to:
Post Comments (Atom)
No comments:
Post a Comment