Saturday, September 05, 2009

ಒನ್ದು ದಿನ ನನ್ನ ಜೊತೆ

ನಾನು ಒಬ್ಬ software engineer... ನನ್ನ ರಾಜ್ಯದಲ್ಲಿರೊ ಬಹಳ ಜನರ ಹಾಗೆ ನಾನು ಕೂಡ ಒಬ್ಬ software ಕೂಲಿ... ಇದನ್ನ ಓದೋರು mostly ನನ್ನ ತರಹದ ಕೂಲಿಗಳೇ ಅನ್ಥ ಗೊತ್ತಿದ್ದರೂ ಬರಿತಾ ಇದ್ದೀನಿ....

ನನ್ನ ಪ್ರತಿ ದಿನ ಪ್ರಾರಮ್ಭವಾಗೊದು ಬೆಳಗ್ಗೆ ೯ ಗನ್ಟೆಗೆ.... unless ಬೊಸ್ ನೊ ೧ ಕರೆ ಮಾಡಿ ಬಾ ಅನ್ದರೆ...ಅದರೆ ಆತ ಅಸ್ಟೊನ್ದು ಉದ್ದಟತನ ತೋರಲಾರ... ಹಾಗಾಗಿ ಅದು ನನ್ನ ಮೇಲೆ ಅವಲಮ್ಬಿತವಾಗಿರುತ್ತದೆ. ಎದ್ದು ರೂಮಿನ ಕಸ ಹೊಡೆದು, ಸ್ವಲ್ಪ ವ್ಯಾಯಮ ಮಾಡಿ, ನೊರೆ ಹಾಲನ್ನ ಕುಡಿದು ಸ್ನಾನಕ್ಕೆ ಹೋಗುವೆ... ಆಶ್ಚರ್ಯ ಆಗಿರಬೇಕಲ್ಲ ನಗರದಲ್ಲಿ ನೊರೆ ಹಾಲು ಹೇಗೆ ಅನ್ಥ... ಅದೆನು ಆ ನೊರೆ ಹಾಲಲ್ಲ... ಹಾಲಿನ ಕವರ್ ಅನ್ನು ಸ್ವಲ್ಪ ಕಡಿದಾಗಿ ಹರಿದು ಲೋಟಕ್ಕೆ ಬಿಟ್ಟರೆ ನೊರೆ ಬರುತ್ತೆ... ಆ ಥರಹದ ನೊರೆ ಹಾಲನ್ನ ಕುಡೀತೀನಿ.

ಸ್ನಾನ ಮಾಡಿ, ದೇವರಿಗೆ ಭಕ್ತಿಇನ್ದ ಪ್ರಾರ್ಥನೆ ಮಾಡಿ, ಮನೆ ಇನ್ದ ಹೊರಗಡೆ ಬಿದ್ದರೆ, ಆಗ ನನ್ನ ದಿನಚರಿ ಪ್ರಾರಮ್ಭ.. ಹೈದರಬಾದಿನ ಬಸ್ಸುಗಳಲ್ಲಿ ಓಡಾಡುವುದು ಎಸ್ಟೊನ್ದು ಕಠಿಣ ಅನ್ಥ ನಿಮಗೆ ಗೊತ್ತಿಲ್ಲ..ಒಮ್ಮೆ ನಮ್ಮ ಹೈದರಬಾದ್ ಗೆ ಬನ್ನಿ. ಬಸ್ಸು ನಿಲ್ದಾಣದಲ್ಲಿ ಒನ್ದೆ ಒನ್ದು ಕ್ಷಣ ನಿಲ್ಲುತ್ತೆ ಅಸ್ಟೆ...ಅಸ್ಟ್ರಲ್ಲಿ ಹತ್ತಿಬಿಡಬೇಕು, ಇಲ್ಲ ಅನ್ದರೆ ಓಡ್ತಾ ಇರೊ ಬಸ್ಸಿಗೆ ಹತ್ತಿದ ಹಾಗೆ ಹತ್ತಬೇಕು, ಇಳಿಯೊವಾಗಲು ಹೀಗೆ ಪಜೀತಿ ಪಡಬೇಕು... ಬಹುಶಹ ಎಲ್ಲ ದೊಡ್ಡ ನಗರಗಳಲ್ಲಿ, ತಮ್ಮದೆ ವಾಹನಗಳಿಲ್ಲದವರು ಪಡುವ ಪಾಡು ಅನ್ನಿಸುತ್ತೆ, unless ನೀನು ಹುಡುಗಿ ಅಗಿ, ಒಬ್ಬ ಬಕ್ರನ್ನ ಹುಡುಕಿಕೊನ್ಡಿದ್ದರೆ ಈ ಪರಿಸ್ಥಿತಿ ಇರೊಲ್ಲ...

ಸರಿ officeನ ಒಳಕ್ಕೆ ಹೊಗುತ್ತಿರುವನ್ತೆಯೆ, ಒನ್ದು ತರಹದ ಉತ್ಸಾಹ ಮೈಯನ್ನ ತುಮ್ಬುತ್ತೆ... ಈ ದಿನ ಒಳ್ಳೆ ದಿನ ಆಗಲಿ ಅನ್ಥ ... ೧೧.೩೦ ಆಗಿದೆ ಈಗ.. ಹೊದ ತಕ್ಷಣ emails ಎಲ್ಲ ನೋಡಿ, ಆ ದಿನ ಏನನ್ನ ಮಾಡಬೇಕು ಅನ್ಥ ನಿರ್ಧರಿಸಿಕೊನ್ಡು, ಜೀತು ಏನನ್ನ ಮಾಡ್ತಾ ಇದ್ದನೆ ಅನ್ಥ ನೊಡ್ತೀನೆ... ಯಕನ್ದ್ರೆ ಬಹುಶಹ ಅವನು ನನ್ನ ತರಹದ emotional fool..ಹಾಗಾಗಿ ಅವನನ್ನು ನನ್ನ ತರಹವೆ use ಮಾಡಿಕೊನ್ಡು ಬಿಸಾಕ್ಥರೆ ಅನ್ಥ... ಮಾರ್ಚಿನಲ್ಲಿ ಇದ್ದುದುಕಿನ್ತಾ ಈಗ ಅವನು ವಾಸಿ, ಕೆಲಸದಲ್ಲಿ ಮುನ್ದುವರಿದಿದಾನೆ..ಅದರೆ ಇನ್ನು tension ಆಗ್ಥನೆ... ಸಹಜವೆ..ನಮ್ಮ team ನಲ್ಲಿ ಇರುವ ತೊನ್ದರೆಗಳನ್ನು ನೋಡಿದರೆ ಎನ್ಥವರಿಗೂ tension ಆಗೇಅಗುತ್ತೆ ಅದರೆ ನನ್ನ ಮ್ಯಾನೇಜರ್ಸ್ಗೆ ಬಿಟ್ಟು.... ಸರಿ ಬಿಡಿ ಅದರ ಬಗ್ಗ್ಯೆ ಮಾತಡಿ ಸುಮ್ಮನೆ ಸಮಯ ವ್ಯರ್ಥ....

ಸರಿ ನನ್ನ ಕೆಳಸದಲ್ಲಿ ಮುಳುಗಿರ್ತೆನೆ...೧.೩೦ ಆಗುತ್ತಿದ್ದನೆ ಊಟ ಬರುತ್ತೆ.....ಸರಿ ಊಟ ಮಾಡಿ ೨.೩೦ಗೆ ಬರೊ ಹೊತ್ತಿಗೆ...ಬಾಸ್ ನೊ ೨ ಬನ್ದಿರುತ್ತೆ... ನನ್ಗೆ ಈಗ ೬ ವರ್ಷ ಇದೇ company ನಲ್ಲಿ experience ಆಗಿದೆ...ನಮ್ಮ ಬಾಸ್ ನೊ ೩ ಕ್ಕೆ ಈಗ ೨.೫ ವರ್ಷ experience ಆಗಿದೆ... ಅದರೆ ನಮ್ಮ ಬಾಸ್ ನೊ ೧ , ಅವರಿಗೆ ೧೦ ವರ್ಷಕ್ಕೂ ಮೇಲ್ಪಟ್ಟು experience ಆಗಿದೆ... ಈ ಬಾಸ್ ನೊ ೩, ಬಾಸ್ ನೊ ೧ ಕ್ಕೆ ಉದ್ದಟತನದಲ್ಲಿ ಮಾತನಾಡುತ್ತೆ, ಬಾಸ್ ನೊ ೧ ಎನೂ ಹೇಳೊಲ್ಲ... ನನ್ನ ಹತ್ತಿರ ಒನ್ದು ದಿನ ಇದೇ ಬಾಸ್ ನೊ ೩ ಆಟ ಆದಿತ್ತು, ಒನ್ದು ಬಲವಾದ ಒದೆತ ಕೊಟ್ಟೆ, ಆಮೇಲೆ ಮಾತಡೊಲ್ಲ... ಹಹ ... ನನ್ನ ರಾಜ್ಯದವರೆ..ಅದರೆ ಈಗ ನನ್ಗೆ ಅರ್ಥ ಆಯ್ಥು ಯಾಕೆ ಕನ್ನಡದವರು ತಮ್ಮ ಕನ್ನಡಿಗರಿಗೆ ಸಹಾಯ ಮಾಡೊಲ್ಲ ಅನ್ಥ... ಬೇರೇ ಕನ್ನಡಿಗರು ಸ್ನೇಹಿತರಾದರು, ಸಹೋದ್ಯೊಗಿಗಳಾದರು, ಅದರೆ ಇವರಸ್ಟು ಅಧಮರಾಗಿರಲಿಲ್ಲ.... ಬಹುಶಹ ಅವರುಗಳು ಅವರ ಮಟ್ಟಿಗೆ ಅವರು ಸರಿ, ಅದರೆ team leader ಅಗಿದ್ದವ, manager ಅಗಿದ್ದವನಿಗೆ ಇವನೆಲ್ಲ ಅರ್ಥ ಮಾಡಿಕೊನ್ದು ಕೆಲಸ ಮಾಡಬೇಕಾಗುವುದು, ಅದರೆ ಹಾಗಾಗಿಲ್ಲ...ಹಾಗಗಿ ಇಲ್ಲಿ ಬಹಳ escalations... ನಮಗೆ ಜನತಾ ದಳದ ಕಥೆ ಗೊತ್ತೇ ಇದೆ... ಅದರ philosophies, idealogies ಎಲ್ಲಾ ಸರಿ , ಅದರೆ too many cooks spoil the food ಅನ್ನೊ ಹಾಗೆ too many leaders spoil the party/project... ೬ ವರ್ಷದ ನನಗೆ ಇದು ತಿಳಿದಿದೆ, ಅವರಿಗೆ ತಿಳಿಯದೆ, ತಿಳಿದು ಸುಮ್ಮನಿದ್ದಾರೆಯೆ, ಹಾಗದಾರೆ ನಾನು ಕೂಡ ಯೊಚಿಸಿ, ಇದನ್ನು ಸರಿ ಮಾಡುವ ಆಸೆಯನ್ನು ಬಿಡಬೇಕು ಅನ್ನಿಸುತ್ತೆ.. ಅನ್ನಿಸುತ್ತೆ ಏನು, ಆಸೆಯನ್ನೆ ಬಿಟ್ಟಿದ್ದೇನೆ... ಆನನ್ತರ ೪ಕ್ಕೆ ಬಾಸ್ ನೊ ೨ ಬರುತ್ತೆ... ಬಾಸ್ ನೊ ೧, ಬಾಸ್ ನೊ ೨, ಬಾಸ್ ನೊ ೩ - ಈ ಮೂವರನ್ನು ನೋಡಿದರೆ ಯಾರಿಗೂ ಆಗೊಲ್ಲ, ಅದರೆ ಯಾರು ಧೈರ್ಯ ಮಾಡಿ ಮ್ಯಾನೇಜರ್ಸ್ ಹತ್ತಿರ ಹೇಳಲಾರರು, ಸರಿ ಅನ್ನಿಸುತ್ತೆ , ತಪ್ಪು ಕೂಡ ಅನ್ನಿಸ್ಸುತೆ.. ನಾನು ಕೂಡ ಅವರ ಹಾಗೆಯೆ ಆಗಿ ಹೋಗಿದ್ದೇನೆ...ನಾನು ಸುಮ್ಮನಾಗಿ ಹೋಗಿದ್ದೇನೆ...

ಸರಿ ಅನ್ದುಕೊನ್ಡು , ಈ ಅವಾನ್ತರಗಳನ್ನು ನೋಡಿಕೊನ್ಡು , ಈ indisciplineಗಳೆಲ್ಲವನ್ನು ಸಹಿಸಿಕೊನ್ದು, frustration ಅದುಮಿಟ್ಟುಕೊನ್ಡು, ಮಲ್ಲಿಕ್ ಮಾಡಿದ promise ಬ್ರೆಕ್ ಮಾಡಿದ ಕೋಪ ಸಹಿಸಿಕೊನ್ಡು ಕೆಲಸ ಮಾಡ್ತಾ ಇದ್ದಿನೆ ಈಗ... ಒನ್ದು ಗಾದೆ ಇದೆ ’ ಹಿರಿಯಕ್ಕನ ಚಾಳಿ ಮನೆ ಮನ್ದಿಗೆಲ್ಲ ಅನ್ಥ’ ಹಾಗೆ ಒಳ್ಳೆ leader , ಒಳ್ಳೆ manager ಇದ್ದರೆ ನಮ್ಮ project ಈ ಅಧೊಗತಿಯಲ್ಲಿ ಇರೊಲ್ಲ... ಸರಿ ಬಿಡು ಇದೆಲ್ಲ ನನ್ಗ್ಯಾಕೆ ಅನ್ದ್ಕೊನ್ದು ಮತ್ತೆ ಕೆಲಸದಲ್ಲಿ ತಲ್ಲೀನ ಆಗಿರ್ತೆನೆ... ಆಗ ರಹಿಮ್ ಬನ್ದು ’ ರನ್ಡಿ ಸಾರ್ , ಚಾಯ್ ತಾಗಿ ವಚ್ಚೀದ್ದಾಮ್, ಮಳ್ಳಿ ನಾಕು ೫ ಗನ್ಟಕು ಚೂನ್ಗ್ ತೊ ಕಾಲ್ ಉನ್ದಿ’... ಆಗ ಜಿತು ಸಹ ಜೊತೆಗೂಡಿ ಚಾ ಕುಡುಯಲು ಹೊರಗಡೆ ಹೊಗುತ್ತೇವೆ...ಮತ್ತೆ ಇದರ ಬಗ್ಗೆಯೆ ಮಾತು .. ನನಗೂ ಸಾಕಾಗಿದೆ... ನಾನು ಇದರ ಬಗ್ಗೆ ಮಾತನ್ನು ಆಡುವುದನ್ನು ಬಿಟ್ಟು ಕೆಲಸ ಕಲಿಯಬೇಕು ಅನ್ಥ ಅನ್ದುಕೊನ್ಡು ಮತ್ತೆ ಬರ್ತೀನಿ.. ಸರಿ ಜಿತುಗೆ ಹೇಳಿಕೊಡ್ತಾ ನಾನು ಕಲಿತಾ ಇರ್ತೆನೆ...ನನ್ಗೆ ಕೆಲಸ ಮಾಡಬೇಕು, ಮುನ್ದುವರಿಬೇಕು ಅನ್ನೊ ಆಸೆ ಇದೆ... ಮಾನೇಜರ್ ಆಗಬೇಕು, profit ತರಬೇಕು ಅನ್ನೊ ಆಸೆ ಇದೆ... ಅದರೆ ನನ್ನ company ಇದೆನೆಲ್ಲ ಉಪಯೊಗಿಸಿಕೊಳ್ಳೊಲ್ಲ ಅನ್ನಿಸುತ್ತೆ...

೬ ಕ್ಕೆ team meeting ಇದೆ, ಆದರೆ ಬಾಸ್ ನೊ ೨, ಬಾಸ್ ನೊ ೩ ೬.೨೦ಕ್ಕೆ ಬರ್ಥಾರೆ, ಬಾಸ್ ನೊ ೧ ಅವರಿಗೆ call ಮಾಡೀ wait ಮಾಡ್ತಾರೆ...ಮಿಕ್ಕ team ಅವರಿಗೊಸ್ಕರ wait ಮಾಡಬೇಕು... ಹೀಗಿದೆ ನಮ್ಮ teamನಲ್ಲಿರೋ ಬೇಜವಾಬ್ದಾರಿತನ... ಮೂವರು ಬಾಸ್ ಗಳದ್ದು... ಆದರೆ ಯಾರು ಇದರ ಬಗ್ಗೆ ದನಿ ಎತ್ತುವುದಿಲ್ಲ... ಹೀಗೆ ಸಾಗಿದೆ... ಯಕನ್ದ್ರೆ ಎಲ್ಲರು ಆದಸ್ಟು ಬೇಗ ಈ company ಬಿಡಬೇಕು ಅನ್ತ.... ಸರಿ ಇನ್ನು meeting ನಲ್ಲಿ ಈ ೩ ಬಾಸ್ ಗಳದ್ದೆ ಭಾಷಣ... ಮಿಕ್ಕವರೆಲ್ಲ ಯಾಕೆ ಸುಮ್ಮನ್ನಿದ್ದರೆ..ಹಾಗದರೆ ಯರಿಗು ಇದನು ಸರಿ ಮಾಡುವ ಆಸೆ ಇಲ್ಲವೆ... ಮಲ್ಲಿಕ್ ಗೆ ಇಲ್ಲ, ರಾಮ್ಮೊಹನಿಗು ಇಲ್ಲ, ಬಾಸ್ ನೊ ೧, ೨, ೩ , ಮತ್ತೆ ಮಿಕ್ಕವರಿಗೂ ಇಲ್ಲ...ನನ್ಗೊಬ್ಬನಿಗೆ ಯಾಕೆ ... ಹೀಗದರೆ ಯವುದು ಮುನ್ದು ಹೊಗುವುದು.. ಅಥವ... ಎಲ್ಲರೂ are they trying to be smarter than others... are they playing politics.. ಸರಿ ಮಲ್ಲಿಕ್ ಹಾಕಿಕೊಟ್ಟ plans ಎಲ್ಲ discuss ಅಗುತ್ತೆ....ಮೂವರು ಬಾಸ್ ಗಳು ಮತ್ತು ನಾನು ಮಾತಾಡುತ್ತೇನೆ ಬಿಟ್ಟು ಬೇರೇ ಯಾರು ಮಾತಾಡೊಲ್ಲ. mostly ಆ ಪ್ಲಾನ್ ಗಳೆಲ್ಲಾ ಯಾಕೆ implement ಮಾಡೊಕೆ ಆಗೊಲ್ಲ ಅನ್ಥ ಮಾತಾಡ್ತಾರೆ, ಆಮೇಲೆ implement ಮಾಡೊಲ್ಲ... ಹಾಗಾಗಿ ಮೂವರು ಬಾಸ್ ಗಳಿನ್ದ ನಮ್ಮ ಪರಿಸ್ಥಿಥಿ ಹೀಗೆ...

ಹೀಗೆ ನನ್ನ ಇಡಿ ದಿನ ಬೇಕಾರ್ ಆಗಿ ಸಾಗುತ್ತೆ... ನನ್ಗೆ ಸತ್ವಯುತವಾದ ಕೆಲಸ ಮಾಡಬೇಕು ಅನ್ಥ ಆಸೆ, ಕಲಿಬೇಕು ಅನ್ಥ ಆಸೆ, ಬೆಳಿಬೇಕು ಅನ್ಥ ಆಸೆ... ನನ್ನ ಆಸೆ ಮಣ್ಣಾಗುತ್ತಿದೆಯೆ ಅನ್ನೊ ಭಯ.... ಅಸ್ಟು ಹೊತ್ತಿಗೆ ೭.೪೫ ಆಗುತ್ತೆ... ನಾನು system ಲಾಕ್ ಮಾಡಿ ಮನೆಗೆ ಹೊರ್ಡುತ್ತೇನೆ...

ಮನೆಗೆ ಬರ್ತೆನೆ, ಎನದ್ರು ಓದೋ ಮನಸಿದ್ದರೆ ಒದುತ್ತೇನೆ... ಆಮೇಲೆ ಬೇರೆಡೆ ಕೆಲಸಗಳಿಗೆ apply ಮಾಡ್ತೇನೆ... ಆಮೇಲೆ ಇನ್ನೇನು ಮಲಗ್ತೇನೆ...

ಮತ್ತೊನ್ಡ್ ದಿನ ಮತ್ತೆ ಪ್ರಾರಮ್ಭ್ಹ ಆಗುತ್ತೆ....

ಹೀಗೆ ಸಾಗಿದೆ ನನ್ನ ಜೀವನ

1 comment:

  1. Hi Harsha,

    thanks for leavin a comment on my blog.and congrats for putting up such a beautiful blog by urself. nice to see some kannada blog..take care

    ReplyDelete