Monday, July 06, 2009

ಭಾಗ 2

ಗುರುವಾರ ಕೂಡ ಮುಗಿದಿತ್ತು . ರಾಮು ಖುಶಿಯಲ್ಲಿಯೆ ಇದ್ದನು. ರಾಜೇಶನು ಇದನ್ನು ನೊಡಿಯೂ ಏನನ್ನು ಹೇಳದೆ ಸುಮ್ಮನಿದ್ದನು.

ಶುಕ್ರವಾರದ ದಿನ ರಾಮು ತನ್ನ ಪ್ರಿಯ ವ್ಯಕ್ತಿಯನ್ನ ಭೇಟಿ ಮಾಡುವುದರಲ್ಲಿದ್ದನು . ಕಛೇರಿಯಲ್ಲಿ ಬೇಗ ಕೆಲಸ ಮುಗಿಸಿ , ಮನೆಗೆ ಸನ್ಜೆ ೬ಕ್ಕೆ ಬನ್ದನು .
ಮಗನನ್ನು ಎನ್ದೂ ಇಸ್ಟು ಬೇಗ ಬನ್ದಿದ್ದು ನೋಡಿರದಿದ್ದ ಸರಸ್ವತಿ ಮಗನ್ನು ಕೇಳಿದರು ’ ಏನ್ ಮಗು ಇಸ್ಟ್ ಬೇಗ ಕೆಲಸದಿನ್ದ ಬನ್ದೆ. ಮೈಯಲ್ಲಿ ಹುಶಾರಿದೆ ತಾನೆ’ ಎನ್ದು ರಾಮುವಿನ ಹಣೆಯನ್ನ ಮುಟ್ಟಿ ನೋಡಿದರು. ಎಲ್ಲವು ಸರಿ ಇದ್ದಿದವು.

ರಾಮು - ಅಮ್ಮ ಇವತ್ತು ಒಬ್ರು ಸ್ನೆಹಿತರನ್ನ ಭೇಟಿ ಮಾಡೋದು ಇತ್ತು. ಅದಕ್ಕೆ ಬೇಗ ಮನೆಗೆ ಬನ್ದ್ನಮ್ಮ. ಹುಶಾರಾಗಿಧೀನಿ, ಏನು ಭಯ ಪಡಬೇಡಮ್ಮ.

ಒಬ್ಬನೇ ಮಗನನ್ನು ಕನ್ದರೆ ಸರಸ್ವತಿಗೆ ಅತಿಯಾದ ವಾತ್ಸಲ್ಯ. ಬೇರೆ ಮಕ್ಕಳು ಇಲ್ಲದ್ದರಿನ್ದ ಸರಸ್ವತಿಗೆ ರಾಮು ಒನ್ದು ಅನರ್ಘ್ಯ ರತ್ನವೇ ಅಗಿದ್ದನು.

ರೂಮಿಗೆ ಹೋಗಿ, ಸ್ನಾನ ಮುಗಿಸಿದ. ಇಮ್ಪೊರ್ಟೆಡ್ ಸ್ಚೆನ್ಟ್ POLO , ಅದನ್ನ ತನ್ನ ಮೈಗೆ ಸಿಮ್ಪಡಿಸಿಕೊನ್ಡನು. ತನ್ನ ಗುನ್ಗುರು ಕೂದಲಿಗೆ parachute ಕೊಬ್ಬರಿ ಎಣ್ಣೆಯನ್ನು ತೆಳುವಾಗಿ ಹಚ್ಚಿದನು . ತೆಳುವಾದ ಬನಿಯನ್ನು, ಅದರ ಮೆಲೆ ತೀರ ಹಗುರವಾದ ಆಕಾಶ ನೀಲಿ ಬಣ್ಣದ ಟಿ-ಶಿರ್ಟ್ ಹಾಗು ಕ್ರೀಮ್ ಬಣ್ಣದ ಕೊಟ್ಟೆನ್ ಪಾನ್ಟ್ ಧರಿಸಿದನು. ಚೆನ್ದದ ಮೈಕಟ್ಟಿತ್ತು ರಾಮುವಿಗೆ. ಹೀಗೆ ನೀಟಾದ ದಿರಿಸು ಧರಿಸಿ, ಅನ್ಗಲಕ್ಕೆ ಬನ್ದಾಗ ಮಗನನ್ನು ನೋಡಿ ಸರಸ್ವತಿ ಮುದಗೊನ್ಡಳು. ’ ಎಸ್ಟು ಚೆನ್ದ ಕಾಣ್ತಾನೆ ಮಗ, ಯಾವ ಹುಡುಗಿ ಬೇಡ ಅನ್ನೊಕೆ ಸಾಧ್ಯ ಇವನ್ನನ್ನ ’ ಎನ್ದುಕೊನ್ಡಳು.
ಹೆತ್ತವ್ರಿಗೆ ಹೆಗ್ಗಣನು ಮುದ್ದೆ, ಅದರೆ ರಾಮು ಯಾರು ನೋಡಿದರು ಸುನ್ದರನು ಎನ್ದೇ ಹೇಳುವರು.

ಸ್ವೀಟುಗೆ ಹೇಳಿದ ಹಾಗೆ CHUTNEYSಗೆ ರಾಮು ಹೊರಟನು. ಅಲ್ಲಿದ್ದ ಸಮ್ಪೂರ್ಣ ಸಮಯ ಒಳ್ಳೆಯ ಕನಸೇನೊ ಎಮ್ಬನ್ತೆ ಕಳೆದು ಹೋಗಿತ್ತು.

ಮನೆಗೆ ಮರಳಿ ಬನ್ದಾಗ ರಾತ್ರಿ ೧೨ ಕಳೆದಿತ್ತು. ಅನ್ಗಳದಲ್ಲಿ ಬೆಳಕಿದ್ದಿದ್ದನು ಕನ್ಡು ರಾಮುವಿಗೆ ಆಶ್ಚರ್ಯ. ಅಪ್ಪ ಅಮ್ಮ ಯಾವಾಗಲು ರಾತ್ರಿ ೧೦ಕ್ಕೆ ಮಲಗುವವರು, ಈ ದಿನ ಯಾಕೆ ಇನ್ದು ಇನ್ನು ಮಲಗದೆ ಕಾಯುತ್ತಲಿದ್ದಾರೆ. ಕಾರ ಪಾರ್ಕ್ ಮಾಡಿ, ಮುನ್ದಿನ ಗೇಟ್ ಬೀಗ ಹಾಕಿ, ಮೈನ್ ಡೋರ್ ಹತ್ತಿರವಿರುವ ಬೆಲ್ಲನ್ನು ಒತ್ತುವದರಲ್ಲಿದ್ದನು. ಅಶ್ಟರಲ್ಲಿ ಸದಾಶಿವ ರಾಯರು ಬಾಗಿಲನ್ನು ತೆರೆದರು.

ರಾಮು - ಹುಶಪ್ಪ, ಬೆನ್ಗಲೂರು ಟ್ರಾಫ್ಹಿಕ್ಕು ಫ಼ುಲ್ಲ್ ಸುಸ್ತ್ ಮಾಡಿಹಾಕುತ್ತೆ....ಏನಣ್ಣ ಇನ್ನು ಮಲಗಲಿಲ್ಲವ...

ಸದಾಶಿವ - ಇಲ್ಲಪ್ಪ, ನಿನಗೇ ಕಾಯ್ತಾ ಇದ್ವಿ.... ನಾಳೆ ಪ್ಲಾನ್ ಎನಿದೆ ನಿನ್ದು........

ಷು ಬಿಚ್ಚುತ್ತಾ ರಾಮು ’ ಏನಿಲ್ಲಣ್ಣ, ನಾರ್ಮಲ್ಲೆ...ರಾಜೇಶನ ಮನೆಗೆ ಹೋಗೊಣ ಅನ್ತ ಇದ್ದೆ , ಯಾಕಣ್ಣ, ಏನು ವಿಷೇಶವಿದೆ ನಾಳೆ ’

ಸದಾಶಿವ - ನಾಳೆ ಮಧ್ಯನ್ಹದ ವರೆಗೂ ಎಲ್ಲಿಗು ಹೋಗಬೆಡಪ್ಪ...ನನ್ನ ಸ್ನೆಹಿತರೊಬ್ಬರು ತಮ್ಮ ಸಮ್ಸಾರ ಸಮೇತರಾಗಿ ನಾಳೆ ತಿನ್ಡಿ ಸಮಯಕ್ಕೆ ಬರೊರಿದ್ದರೆ.. ಹಾಗಾಗಿ ಎಲ್ಲಿಯು ಹೋಗಬೇಡ

ರಾಮು - ಸರಿ ಅಣ್ಣ... ರಾಜೇಶನ ಮನೆಗೆ ಸನ್ಜೆಗೆ ಹೋಗ್ತೆನೆ.

ಸದಾಶಿವ ರಾಯರು ಎನ್ದೂ ಹೀಗೆ ಇದ್ದಕಿದ್ದ ಹಾಗೆ ಈ ರೀತಿಯ ವ್ಯವಸ್ತೆ ಮಾಡೋರಲ್ಲ... ಏನಿರಬಹುದು ಇದರ ಮರ್ಮ ಎನ್ದು ಕೊನ್ಡು ರಾಮು ತನ್ನ ರೂಮಿಗೆ ಹೋದನು.

ಇತ್ತ ಹಾಲಿನ ದೀಪ ಆರಿಸಿ ಸದಾಶಿವ, ಸರಸ್ವತಿ ತಮ್ಮ ಕೊಟಡಿಗೆ ಬನ್ದರು.

ಸರಸ್ವತಿ - ಏನೂ ಅನ್ದ್ರೆ...ನಾಳೆ ಹೆಣ್ಣಿನವರು ಬರ್ತಾ ಇದ್ದಾರೆ ಎನ್ದು ಮಗುಗೆ ಹೇಳಿದ್ರೆ ಚೆನ್ದಿತ್ತು ಅಲ್ವೆ.....ಮಗುಗೆ ನಾಳೆ ಸುಮ್ಮನೆ ಶಾಕ್ ಆಗುತ್ತೆ....

ಸದಾಶಿವ - ನಿನ್ನ ಮಗನಿಗೆ ಹೆಣ್ಣು ನೋಡೊಕೆ ಹೋಗೋಣ ಅನ್ದ್ರೆ ಏನೇನೋ ಕಾರಣ ಕೊಟ್ಟು ಮುನ್ದೂಡ್ತಾನೆ. ಅದಕ್ಕೆ ಈ ಆಟ ಹೂಡಿದೆ ಕಣೆ. ನಾಳೆ ಆ ಹುಡುಗಿನ ನೋಡಲಿ, ಮಾತಾಡಲಿ ಆಮೇಲೆ ನೋಡೊಣ. ಮೊಮ್ಮಕ್ಕಳನ್ನ ಆಡಿಸೊ ಆಸೆ ನಿನ್ಗಿಲ್ವೆನೆ.

ಸರಸ್ವತಿ - ಇದೆ ಅನ್ದ್ರೆ... ಆದರೆ ಮಗು ಶಾಕ್ ಅಗ್ತಾನಲ್ಲ ಅನ್ತ ಅಸ್ಟೆ.....

ಸದಾಶಿವ - ಪರ್ವಾಗಿಲ್ಲ ಬಿಡೆ..ನಿನ್ನ ಮಗು ಈಗ ಮಗು ಅಲ್ಲ..ದೊಡ್ಡ ಹುಡುಗ...ಇದೆಲ್ಲ ಜೀವನದಲ್ಲಿ ಒಮ್ಮೆ ಬರೊಅನ್ತಾದ್ದು...ನಾಳೆ ಕಾರ್ಯ ಮುಗಿಲಿ....ಹಾಗೆ ನಾಳೆ ಸ್ಪೆಶಲ್ ತಿನ್ಡಿ ಮಾಡು.... ಅವರು ೧೦ಕ್ಕೆ ಬರ್ತಾರೆ... ಈಗ ಮಲಗುವ... ಈ ಯಾವ ವಿಚಾರನು ಅವನಿಗೆ ಹೇಳಬೇಡ........

ಸರಸ್ವತಿ - ಸರಿ ಅನ್ದ್ರೆ... ನಾಳೆ ಬೇಗ ಏಳ್ಬೆಕು ಮತ್ತೆ....

ದೀಪ ಆರಿಸಿ ಇಬ್ಬರು ಮಲಗಿದರು.. ಇತ್ತ ರೂಮಿನಲ್ಲಿ ರಾಮು ಆಲೊಚಿಸುತ್ತ ಇದ್ದಾನೆ....ಅಪ್ಪ ದಿನಾ ಹೆಣ್ಣಿನ ವಿಚಾರಾ ಮತಡ್ತಾ ಇರ್ತಾರೆ.....ನಾಳೆ ಏನಾದ್ರು ಹೆಣ್ಣಿನವ್ರೆ ಬರ್ತಾ ಇಧಾರಾ...ಸಹೊದ್ಯೊಗಿ, ಸಮ್ಸಾರಾ ಸಮೇತ ಅನ್ದಾಗ ಅನುಮಾನ ಬರ್ತಾ ಇದೆ.... ನಾಳೆ ನೊಡಿದ್ರಾಯ್ತು ಬಿಡು ಎನ್ದುಕೊನ್ಡು, ಎನ್ ಅವರು ಬನ್ದು ನೊಡಿಕೊನ್ಡು ಹೋಗಿಬಿಟ್ರೆ ಮದುವೇನೇ ಅಗಿಹೊಗುತ್ತಾ....ನಾಳೆನೆ ನೊಡಿದರಾಯ್ತು ಅನ್ದುಕೋನ್ಡು ಸನ್ಜೆ ನನ್ತರದ ಸವಿ ಸಮಯವನ್ನು ನೆನೆಯುತ್ತ ನಿದ್ರೆಗೆ ಜಾರಿದನು...

No comments:

Post a Comment