೩ ದಿನಗಳ ನನ್ತರ ರಾಮುವಿನ ಮೊಬೈಲ್ ಬುಜ಼್ಜ಼್ ಗುಟ್ಟಿತು. ’ಚಿನ್ನ, ಮನೆಗೆ ತ್ವರೆಇನ್ದ ಹೋಗಬೇಕಾಯಿತು, ಹಾಗಾಗಿ ನಿನಗೆ ಹೇಳಲು ಆಗಲಿಲ್ಲ. ಅಲ್ಲಿ ಮಳೆಬನ್ದು ಕರ್ರೆನ್ಟ್ ಇಲ್ಲದೆ, ಮೊಬೈಲ್ ಚಾರ್ಜ್ ಮಾಡಲು ಆಗಲಿಲ್ಲ. ಎನ್ದಿನನ್ತೆ ನಮ್ಮಕೊಮ್ಮನ್ ಪ್ಲೇಸ್ಗೆ ಬಾ, ೬ ಗನ್ಟೆಗೆ ಮರಿಬೇಡ ಬ್ಯುಗಲ್ ಪಾರ್ಕ್’ ಎನ್ದು sweetu ಇನ್ದ ಮೆಸೇಜ್ ಬನ್ತು. ರಾಜೇಶ ಅದನ್ನು ಓದಿ, ಸನ್ಜೆ sweetu ಅನ್ನು ಭೇಟಿ ಮಾಡಿದರೆ, ರಾಮು ಹೀಗೇಕೆ ಮಾಡಿಕೊನ್ಡ ಎಮ್ಬುದು ಗೊತ್ತಾದರು ಗೊತ್ತಗಭುದು ಎನ್ದುಕೊನ್ಡ. ದಿನವೆಲ್ಲ ಕೆಲಸದಲ್ಲಿ ಮುಳುಗಿದರು, ರಾಮು ಅವನ ಮನಸಿನಿನ್ದ ಹೊಗಿರಲಿಲ್ಲ.. ಅವನ ಅಗಲಿಕೆ ನೊವನ್ನುನ್ಟು ಮಾಡಿತ್ತು... ಸಹಜವೇ ಸದಾ ಸನಿಹದಲ್ಲಿರುವ ವ್ಯಕ್ತಿ, ಇದ್ದಕಿದ್ದನ್ತೆ ಮಾಯವದರೆ, ಯಾರು ತಾನೆ ಸಹಿಸಬಲ್ಲರು. ರಾಜೇಶನ ಮನಸ್ಸು ರಾಮು ಸತ್ತಿದಕ್ಕೆ ನೋವು, ಅವನ ತನ್ದೆ ತಾಯಿರಿಗೆ ಇಳಿವಯಸ್ಸಿನಲ್ಲಿ ಒನ್ಟಿಯಾಗಿ ಬಿಟ್ಟು ಹೋಗಿದ್ದಕ್ಕೆ ಕೋಪ, ಹೀಗೆ ಗೊನ್ದಲಗಳ ಗೂಡಾಗಿದ್ದಿತು. ರಾಮು ೬ ಗನ್ಟೆಗೆ ಹೀಗೆ ಕಾಯುತ್ತಿದನೊ ಇಲ್ಲವೊ, ರಾಜೇಶ ಮಾತ್ರ ನಿಮಿಶವೊನ್ದೊನ್ದು ಯುಗವೆಮ್ಬನ್ತೆ ಕಳೆದ.
ಸನ್ಝೆ ೫ ಆಗುತ್ತಿದ್ದನ್ತೆ , ರಾಜೇಶ ತನ್ನ ಕೆಲಸಗಳನ್ನು ಬಿಟ್ಟು, sweetuಅನ್ನು ಕಾಣಲು ಬ್ಯುಗಲ್ ರಾಕ್ ಪಾರ್ಕ್ ಕಡೆಗೆ ಹೋರಟನು. ಸನ್ಜೆಯ ಟ್ರಾಫಿಕ್ ನಡುವೆ ಬ್ಯುಗಲ್ ಪಾರ್ಕ್ ಸೇರುವ ಹೊತ್ತಿಗೆ ೫.೫೫ ಅಗುತ್ತಲಿತ್ತು. ಬ್ಯುಗಲ್ ರೊಕ್ ಪಾರ್ಕ್ ನ ತಣ್ಣಗಿನ ಹವಾಮಾನ ಕೂಡ ರಾಜೇಶನ ನೋವಿನ ಬಿಸಿಯನ್ನು ಕಡಿಮೆಮಾಡಲು ಆಗಲಿಲ್ಲ. ಅತುರ ಆತುರವಾಗಿ ಬನ್ದರು, ಬ್ಯುಗಲ್ ಪಾರ್ಕ್ನ್ ನಲ್ಲಿ ಎಲ್ಲಿ ಎನ್ದು ರಾಜೇಶನಿಗೆ ಗೊತ್ತಿರಲಿಲ್ಲ. ’ ಕಲ್ಲು ಮನ್ಟಪಕ್ಕೆ ಬಾ ’ ಎನ್ದು sweetu ವಿಗೆ ಮೆಸೇಜ್ ಮಾಡಿ, ತಾನು ಕಲ್ಲು ಮನ್ಟಪದ ತಮ್ಪಗಿನ ಕಲ್ಲಿನ ಮೇಲೆ ಕುಳಿತರು, ಬಿಸಿ ಕೇನ್ದದ ಮೇಲೆ ಕುಳಿತನ್ತೆ sweetu ವಿಗೆ ಕಾಯುತ್ತಲಿದ್ದನು. ಸನ್ಜೆ ೬ ಕ್ಕೆ, ಬ್ಯುಗಲ್ ರಾಕಿನಲ್ಲಿ ಕದ್ದು ಮುಚ್ಚಿ ಪ್ರೇಮದ ಹೆಸರಿನಲ್ಲಿ ಕಾಮವನ್ನು ಮಾಡುವರು , ಅಲ್ಲಲ್ಲಿ ಬನ್ಡೆಗಳ ಮರೆಯಲ್ಲಿ ಮರೆಯಾಗುತ್ತಲಿದ್ದರು. ಪೋಲಿಸರು ಇದನ್ನು ಕನ್ಡು ಕಾಣದವರನ್ತೆ ತಮ್ಮ ಮಾಮೂಲಿ ವಿಚಾರದಲ್ಲಿ ತಲೆ ಬಿಸಿಮಾಡಿಸಿಕೋನ್ಡು , ಮೂಲೆಯಲ್ಲಿರುವ ಟಿ ಶೊಪ್ ನಲ್ಲಿ ಟೀ ಕುಡಿಯುತ್ತಲಿದ್ದರು. ಕಲ್ಲು ಮನ್ಟಪದ ಹತ್ತಿರ ರಾಜೇಶನನ್ನು ಹೋರೆತು ಪಡಿಸಿ ನಿರ್ಜನವಾಗಿತ್ತು. ಅದರೆ ಅಸ್ಟರಲ್ಲೆ ಒಬ್ಬರು ಅದೇ ದಾರಿಯಲ್ಲಿ ಬನ್ದು ಮನ್ಟಪದ ಮೆಟ್ಟುಲುಗಳ ಮೇಲೆ ಹತ್ತುತ್ತಾ ರಾಜೇಶನು ಇರುವುದನ್ನು ಕನ್ಡರು. ನೋಡಲು ಸುನ್ದರವಾಗಿ ಇದ್ದರು ಆ ವ್ಯಕ್ತಿ. ಇಬ್ಬರು ಇವನೇಕಪ್ಪ ಇಲ್ಲೆಯೆ ಇದ್ದನೆ ಎನ್ದುಕೋಳ್ಳುತ್ತಾ ಇದ್ದರು. ಅಸ್ಟರಲ್ಲಿ ರಾಜೇಶನು, ಇನ್ನು ಏಕೆ sweetu ಬರಲಿಲ್ಲವಲ್ಲ ಎನ್ದು ಒನ್ದು ಕರೆ ಮಾಡಿಯೆಬಿಡೊಣವೆನ್ದುಖೊನ್ಡನು. ಅಸ್ಟರಲ್ಲಿ ಆ ಮೊಬೈಲ್ ಗೆ ಒನ್ದು ಕರೆ ಬನ್ತು. ಅದು sweetu ವಿನ ಕರೆ. ಮೊಬೈಲ್ ಎತ್ತಿ ಇನ್ನೆನು ರಾಜೇಶನು ಉತ್ತರಿಸಬೇಕು, ಅತ್ತಲಿನ್ದ ಒನ್ದು ಗನ್ಡಸಿನ ದ್ವನಿ ’ ಏನಿದು ಚಿನ್ನ, ನಾನು ಇಲ್ಲೆ ಕಾಯ್ತಾಇಧೀನಿ’. ಆ ಕ್ಶಣ ಕಲ್ಲು ಮನ್ಟಪ , ಅಲ್ಲಿದ್ದ ಅವರಿಬ್ಬರು, ಕಲ್ಲೇ ಆಗಿಹೋದರು.
ರಾಜೇಶನು sweetuವನ್ನು ಹೆಣ್ಣ ಎನ್ದು ಭಾವಿಸಿದ್ದನು.ಹಾಗಲ್ಲವೆನ್ದು ತಿಳಿದು ಘಾಬರಿಯಾದನು. sweetu ಅಲಿಯಾಸ್ ರಮೇಶನು, ರಾಮುವಿನ ಮೊಬೈಲ್ ಬೇರೆಯವರ ಕೈಯಲ್ಲಿ, ಅದನ್ನು ನೋಡಿಯೆ ಘಾಬರಿಗೊನ್ಡನು. ಇಬ್ಬರು ಕ್ಶಣಕಾಲ ಮೌನವಾದರು.
ಆದರೆ ರಮೇಶನೇ ಧೈರ್ಯ ತನ್ದುಕೊನ್ದೂ
ರಮೇಶ - ಈ ಮೊಬೈಲ್ ನನ್ನಗೆ ತಿಳಿದವರದು, ನಿಮ್ಮ ಬಳಿ ಹೇಗೆ
ರಾಜೇಶ ಇನ್ನು ತನ್ನ ಆಘಾತದಿನ್ದ ಹೊರಗೆ ಬರುತ್ತಾ - ’ ಇದು ನನ್ನ ಸ್ನೆಹಿತರೊಬ್ಬರದು, ಅವರು ಅವರ ಇನ್ನೊಬ್ಬ ಸ್ನೆಹಿತನನ್ನು ಭೇಟಿ ಮಾಡಿ ಬರಲು ನನ್ನನು ಕಳುಹಿಸಿದ್ದರೆ. sweetu ಅವರ ಹೆಸರು ಎನ್ದಸ್ಟೇ ನನಗೆ ಗೊತ್ತು.
ರಮೇಶ ಈ ಮಾತುಗಳನ್ನು ಕೇಳಿ, ಅದಕ್ಕೆ ಉತ್ತರಿಸಬೇಕೋ ಬೇಡವೋ ಅಮ್ಬ ಜಿಗ್ನಾಸೆಗೆ ಒಳಗಾದನು. ಎದುರುಗಿರುವ ವ್ಯಕ್ತಿ ಅವನ ರಾಮುವಿನ ಮಿತ್ರನೆ, ಶತ್ರುವೆ? ಅದರು ಧೈರ್ಯ ತನ್ದುಕೊನ್ಡು
ರಮೇಶ - ಅಹುದು, ನಾನೆ sweetu, ರಾಮು ನನ್ನನ್ನೆ ಇಲ್ಲಿ ಭೇಟಿ ಮಾಡಲು ಬರುವನಿದ್ದನು. ಅವನು ಬರದೆ ನೀವು ಬರಲು ಕಾರಣ
ರಾಜೇಶ - ನಾನು ರಾಮುವಿನ ಸ್ನೇಹಿತ ರಾಜೇಶ. ಅನಿರೀಕ್ಶಿತ ಕಾರಣಗಲಿನ್ದ ಅವನು ಬರಲು ಆಗಲಿಲ್ಲ.
ರಮೇಶ - ಆಹ್ ನೀವು ರಾಜೇಶ ಅವರೆ. ನಿಮ್ಮ ಭಗ್ಗೆ ರಾಮು ಹಲವಾರು ಸಲ ಹೇಳಿದ್ದನೆ. ನೀವು ಅವನ ಪ್ರಾಣ ಮಿತ್ರರು ಎನ್ದು.
ರಾಜೇಶ - ನಾನು ನಿಮ್ಮನ್ನು ಭಾನುವಾರ ಭೇಟಿ ಮಾಡಲು ಕರೆ ಮಾಡಿದೆ, ಆದರೆ ನಿಮ್ಮ ಮೊಬೈಲ್ ಸ್ವಿಚ್ ಒಫ಼್ ಆಗಿತ್ತು.
ರಮೇಶ - ಅಹುದು, ನಾನು ಊರಿಗೆ ಹೊಗಿದ್ದೆ, ಹಾಗಾಗಿ ಸಿಗಲು ಆಗಲಿಲ್ಲ. ಮನ್ಗಳೂರಿನ ಮಳೆಗಾಲ ನಿಮಗೆ ತಿಳಿದಿದೆ ಅಲ್ಲವೆ. ಮಳೆ, ಗಾಳಿ, ಹಾಗು ಕರೆನ್ಟ್ ಇರೊದಿಲ್ಲ.
ರಾಜೇಶ - ಅದೆಲ್ಲ ಸರಿ, ರಾಮುವಿನ ಬದಲು, ನೀವು ಏಕೆ ಕರೆಮಾಡಿದ್ದಿರಿ
ಈ ಪ್ರಶ್ಣೆಗೆ ಉತ್ತರಿಸಲು, ರಾಜೇಶನು, ಒತ್ತಿ ಬರುತ್ತಿರುವ ದು:ಖ ವನ್ನು ತಡೆದು ಕೊನ್ಡು - ಮೊನ್ನೆ ಭಾನುವಾರ, ರಾಮು ನಮ್ಮನು ಎಲ್ಲರನ್ನು ಬಿಟ್ಟು ದೇವರನ್ನು ಸೇರಿದನು.
ರಮೇಶನಿಗೆ ಇದನ್ನು ಕೇಳಿ ನಮ್ಬಲು ಆಗಲಿಲ್ಲ. ರಾಮು ಏನದರು ಈ ರೀತಿ ಹೇಳರು ರಾಜೇಶನಿಗೆ ಹೇಳಿದನೆ. ಅಥವ ಎದುರುಗಿರುವ ವ್ಯಕ್ತಿ ರಾಜೇಶನೆ ಅಲ್ಲವೆ.
ರಮೇಶ - ನಿಮ್ಮ ಮಾತನ್ನು ನಮ್ಬಲು ಆಗುತ್ತಿಲ್ಲ. ರಾಮು ಇಲ್ಲ . ಅದರೆ ನಿಮ್ಮನು ರಾಜೇಶ್ ಎನ್ದು ಹೇಗೆ ನಮ್ಬುವುದು.
ರಾಜೇಶ - ಇದು ನನ್ನ DL. ಈಗಲಾದರು ನೀವು ನಮ್ಬಬುಹುದು.
ರಮೇಶನಿಗೆ ಇದೆಲ್ಲವು ನಿಜವೊ ಸುಳ್ಳೊ ಕನಸೋ ನನಸೊ ತಿಳಿಯದೆ ಭ್ರಾನ್ತಿಗೊಳಗಾದನು. ತನ್ನ ಪ್ರೆಮಿಯು ಇನ್ನಿಲ್ಲವೆ? ತಾನು ಇನ್ನು ಒನ್ಟಿಯೆ? ಓ ದೇವರೆ ಎನ್ತಾ ಕೆಲಸ ಮಾಡಿಬಿಟ್ಟೆ
ರಾಮುವು ಮನಸಿನಲ್ಲಿ ಏನಿತ್ತು, ಏಕೆ ಹೀಗೆ ಮಾಡಿಕೊನ್ಡನೆದು ನೆನೆದು ಅತ್ತನು.
ರಾಜೇಶ - ನಿಮಗೆ ಈ ಸುದ್ದಿ ಹೇಳಲು ಇಲ್ಲಿಗೆ ಕರೆದಿದ್ದೆ. ಅವನು ಪ್ರೀತಿಸಿದ್ದ ನಿಮ್ಮನ್ನು ಎನ್ದು ತಿಳಿದಿತ್ತು. ಆದರೆ ನೀವು ಗನ್ಡಸರೆನ್ದು ಮಾತ್ರ ತಿಳಿದಿರಲಿಲ್ಲ. ಅವನು ಇದಕ್ಕಾಗಿ ಸತ್ತನೆನ್ದು ಈಗ ತಿಳಿಯಿತು. ಅದರೆ ನನಗೆ ಇದನ್ನು ಇನ್ನು ನಮ್ಬಲಾಗುತಿಲ್ಲ.
ನಾನು ಅವನನ್ನು ಗಮನಿಸಿರುವ ಮಟ್ಟಿಗೆ, ಅವನಿಗೆ ಹೆಚ್ಚು ಸ್ನೆಹಿತರು ಇರಲಿಲ್ಲ. ಅದರೆ ಅವನು ಎಲ್ಲಿಯು ಗನ್ಡಸರ ಓಡನೆ ಹೆಚ್ಚು ಸಲಿಗೆ ಬೇಳೆಸುತ್ತರಿಲ್ಲಿಲ್ಲ. ಅದರೆ ಹೀಗೆ
ರಮೇಶ - gay ಅಥವ ಸಲಿನ್ಗ ಕಾಮಿಗಳು ಎನ್ದರೆ, ಬರಿ ಕಾಮವೆ ಇರುವುದಿಲ್ಲ. ಅಲ್ಲಿ ಪ್ರೆಮವು ಉನ್ಟು. ಪ್ರೀತಿ ಎಮ್ಬುದು ಇಬ್ಬರು ವ್ಯಕ್ತಿಗಳ ನಡುವಿನ ಬನ್ಢ. ಅದರೆ ಎಲ್ಲರು ಅರ್ಥ ಮಾಡಿಕೊಳ್ಳಲಾರರು. ರಾಮುವಿಗೆ ಮನೆಯಲ್ಲಿ ಮದುವೆ ಮಾಡಬೇಕ್ನ್ದು ಕೊನ್ಡಿರುವುದು ನನಗೆ ಗೊತ್ತಿತ್ತು. ಅದರೆ ೪ ವರ್ಷದಿನ್ದ ನಮ್ಮ ಪ್ರೇಮ ನಡೆದಿತ್ತು. ನಿಮಗು ತಿಳಿದಿದೆ.
ರಾಜೇಶ - ನಾನು ಇನ್ನು ಹೊರಡುತ್ತೆನೆ.
ರಮೇಶ - ನಿಮ್ಮಿನ್ದ ಬಹಳ ಉಪಕಾರವಾಯ್ತು. ನೀವಿರದಿದ್ದರೆ, ಅವನು ನಮ್ಮನ್ನು ಬಿಟ್ಟು ಹೊಗಿದ್ದರ ವಿಶಯವೆ ನನಗೆ ತಿಳಿಯುತ್ತಿರಲಿಲ್ಲ. ನಿಮಗೆ ಸದಾ ನಾನು ಚಿರರುಣಿ
ಅಸ್ಟರಲ್ಲಿ ರಾಜೇಶನು ಅಲ್ಲಿನ್ದ ಹೊರಟುಹೊಗಿದ್ದನು. ಪಡುವಣದಲ್ಲಿ ಸೂರ್ಯನು ಮುಳುಗಿದ್ದನು. ರಮೇಶನು ಅನ್ಧಕಾರದಲ್ಲಿ , ಆ ಕಲ್ಲಿನ ಮನ್ಟಪದಲ್ಲಿ ಕರಗಿಹೋದನು
ಇತ್ತ ಮನೆಗೆ ಬನ್ದ ರಾಜೇಶನು, ಈ ಸನ್ಜೆ ನಡೆದ ಘಟನೆಗಳು ನಮ್ಬಲಸಾಧ್ಯ ಆಗಿದ್ದವು. ಊಟ ಎಮ್ಬುದು ಶಾಸ್ತ್ರಕ್ಕೆ ಆಯ್ತು. ತನ್ನ ರೂಮ್ ಯವಾಗ ಸೆರುತ್ತೆನೊ ಎನ್ದು ರಾಜೇಶನು ಕಾದಿದ್ದನು. ಅವನ ಮನಸಿನಲ್ಲಿ ಬರೀ ಪ್ರಶ್ನೆಗಳು. ಉತ್ತರ ಹುಡುಕು ತಲ್ಲಣ.
ಸಲಿನ್ಗ ಕಾಮವು, ಬೇರೇ ಕಾಮಕ್ಕೆ ಸಮನೆ, ಅದು ತಪ್ಪೆ? ಪ್ರೇಮವು ದೊಡ್ಡದು ಎನ್ದು ಹೇಳುತ್ತರೆ, ಹಾಗಿದ್ದರೆ ಸಲಿನ್ಗ ಪ್ರೇಮವು ತಪ್ಪೆ? ಒಬ್ಬ ಯುವಕ, ತನ್ನ ಬಾಳ ಸನ್ಗಾತಿಯಾಗಿ ಇನ್ನೊಬ್ಬ ಯುವಕನನ್ನು ಸ್ವೀಕರಿಸುವುದು ತಪ್ಪೆ? ಅವರಿಗೆ ಬಾಳಲು ಹಕ್ಕು ಇಲ್ಲವೆ? ಇದರಿನ್ದ ಸಮಾಜದ ಮೇಲೇ ಪರಿಣಾಮವೇನು? ಇದು ರೋಗವೆ? ಇದು ಇರವುದು ಸಹಜವೆ? ರಾಮು ಇದಕ್ಕೆ ಸತ್ತನೆ? ತಾನು ಹೇಗೆ ಎನ್ದು ಹೇಳಿದ್ದರೆ ನಾನು ಸಹಿಸುತ್ತಿದ್ದನೆ? ಒಪ್ಪುತ್ತಿದ್ದನೆ? ಅವನ ಸನ್ಗಡ ಮೊದಲಿನ ಹಾಗೆ ಇರುತ್ತಿದ್ದನೆ? ಅದರೆ ಸಾವೆ ಇದಕೆಲ್ಲ ಪರಿಹಾರವೆ? ಈ ವಿಚಾರವನ್ನು ಮನೆಯವರಿಗೆ ಹೇಳಿದ್ದರೆ ಅವರು ಒಪ್ಪುತ್ತಿದ್ದರೆ? ಅವನು ಹೇಣ್ಣೋನ್ದನ್ನು ಮದುವೆ ಯಾಗಿ ಇದೆಲ್ಲದರಿನ್ದ ದೂರ ಇರಬಹುದಿತ್ತೆ? ಮದುವೆ ಯವುಗುವುದು ಸರಿಯೆ? ಹೆಣ್ಣೊನ್ದರ ಜೀವನವನ್ನು ಈ ವಿಚರದಲ್ಲಿ ಪಣಕಿದುವುದು ಸರಿ ಇರುತ್ತಿತ್ತೆ? ರಾಮುವನ್ನು ಎಸ್ಟೊನ್ದು ಜನರು ಪ್ರೀತಿಸುತ್ತಾ ಇದ್ದರು. ಅವನ ತನ್ದೆ ತಾಯಿ , ನಾನು, sweetu. ನಮ್ಮೇಲ್ಲರನ್ನು ನಡುವೆ ಬಿಟ್ಟು ಹೊಗಿದ್ದು ಸರಿಯೆ? ಅದರೆ ಅವನ ಸಾವೆ ಇದೆಕೆಲ್ಲಾ ಪರಿಹಾರವೆ? ಇನ್ನು ಅವನ ತನ್ದೆ ತಾಯಿ ಹೇಗೆ ಜೀವಿಸುತ್ತರೆ? ಹೆತ್ತ ತನ್ದೆ ತಾಯಿಯರ ಮೇಲೆನ ಜವಾಬ್ದಾರಿ ಅವನನ್ನು ಸಾವಿನ ದಾರಿ ತುಳಿಯದನ್ತೆ ತಡೆಲಾರದೆ ಹೊಯ್ತೆ... ರಾಮು ಎನ್ದೂ ಯರನ್ನೊ ಹೆಚ್ಚು ಗಮನಿಸಿದ್ದನ್ನು ನಾನು ನೋಡಲು ಇಲ್ಲ. ನನ್ಗೆ ಗೊತ್ತಿದ್ದರೆ, ಅವನನ್ನು ಸಾಯಲು ಬಿಡುತ್ತಿರಲಿಲ್ಲ. ಯಾರೊಡನೆಯು ಅಸ್ಭ್ಯ ವರ್ತನೆ ಮಾಡಿದ್ದನೆದು ಕೇಳಿರಲಿಲ್ಲ... ೪ ವರ್ಷ ಒಬ್ಬರನ್ನೇ ಪ್ರೀತಿಸುವು ಸುಲಭ್ಹವೇನಲ್ಲ. ನಾವು ಇಲ್ಲಿಯವರ್ಗು ಸಲಿನ್ಗ ಪ್ರೀಮಿಗಳ ಬಗ್ಗೆ ಕೇಳಿರಲೇ ಇಲ್ಲ, ಕೇಳಿದೆಲ್ಲವು ಸಲಿನ್ಗ ಕಾಮಿಗಳ ಭಗ್ಯೆ. ಪ್ರೇಮಿಸಿದ್ದು ರಾಮುವಿನ ತಪ್ಪೆ? ರಮೇಶನ್ನು ಪ್ರೆಮಿಸಿದ್ದು ತಪ್ಪೆ? ಪ್ರೆಮವು ಕುರುಡು ಎನ್ದು ಕೇಳಿದ್ದೆ, ಪ್ರೇಮವನ್ನು ಹುಟ್ಟಿಸಲು ಸಾಧ್ಯವಿಲ್ಲ ಎನ್ದು ಕೇಳಿದ್ದೆ. ಹಾಗಿದ್ದರೆ ರಾಮು ಮಾಡಿದ್ದು ತಪ್ಪೆ? ಸಾವಿನ್ದ ಯಾರಿಗೆ ಸಹಾಯವಾಯ್ತು, ಅದದ್ದು ರಾಮುವಿಗೆ ಮಾತ್ರವೆ? ಅವನ್ನನು ನಮ್ಬಿದ ಮಿಕ್ಕವರೆಲ್ಲರು ನೊವಿನಲ್ಲಿ ಇರಬೇಕಾಯ್ಥೆ... ರಾಮುಗೆ ಹೀಗೆ ಸಾವಿಗೆ ಶರಣಾಗಬಾರದಿತ್ತು. ಅದರೆ ಬದುಕಿದ್ದಿದ್ದರೆ ಇದಕ್ಕೆ ಇನ್ನವ ತರಹದ ಉತ್ತರ ಸಿಗುತ್ತಿತ್ತೊ? ಏಸ್ಟೋ ಪ್ರಶ್ನೆಗಳು, ಉತ್ತರಿಸಲು ರಾಮುವಿರಲಿಲ್ಲ. ಉತ್ತರ ಸಿಗದೆ ರಾಜೇಶನು ತಳಮಳದಿ ಮಗ್ಗಲು ಬದಲಿಸಿದನು. ಕಿಟಕಿಯ ಹೋರಗಡೆ ಚನ್ದ್ರ ಮಾತ್ರ ಎನ್ದಿನನ್ತೆ ಬೆಳ್ಳಿಯ ಬೆಳಕನ್ನು ಚೆಲ್ಲುತ್ತಲಿದ್ದನು
ಕಾಲವು ಯಾರನ್ನು ಕಾಯುತ್ತ ನಿಲ್ಲದು, ಅದು ನಿರನ್ತರವಾಗಿ ಸಾಗುತ್ತಲೆ ಇರುತ್ತದೆ.. ನಿರನ್ತರ
ಶುಭಮ್
Subscribe to:
Post Comments (Atom)
No comments:
Post a Comment