ಶನಿವಾರದ ಬೆಳಗ್ಗೆ ೬ಕ್ಕೆನೆ ಎದ್ದು ಸರಸ್ವತಿ ರೈಡಿಯೊ ಆನ್ ಮಾಡಿ ವಿಷ್ಣು ಸಹಸ್ತ್ರನಾಮ ಬರೊ ಸ್ಟೇಷನ್ನುಗೆ ಟ್ಯುನ್ ಮಾಡಿದಳು..ಸ್ನಾನ ಮಾಡಿ, ಪೂಜೆ ಮುಗಿಸಿ, ತನಗೂ ಸದಾಶಿವರಿಗೂ ಕಾಫ್ಹಿ ಮಾಡಿ ..ಹಾಲ್ ನಲ್ಲಿ ಪೇಪರ್ ಓದುತ್ತ ಇದ್ದ ಸದಾಶಿವರಿಗು ಕೊಟ್ಟಳು.....
ಸರಸ್ವತಿ - ಏನೂ ಅನ್ದ್ರೆ , ಪೇಪರ್ ಓದುತ್ತಾ ಲೇಟ್ ಮಾಡಬೇಡಿ...ಕಾಫ್ಹಿ ಕುಡಿದು ಬೇಗ ವಾಕ್ ಮುಗಿಸಿಕೊನ್ಡ್ ಬನ್ನಿ....ಹಾಗೆ ಕೊನೆ ಮನೆ ಲಕ್ಶ್ಮಿ ನಿಮಗೇನಾದ್ರು ಸಿಕ್ಕರೆ ಇವತ್ತು ನಾನು ವಾಕ್ಗೆ ಬರೊಲ್ಲ ಅನ್ತ ಹೇಳಿಬಿಡಿ.....
ಸದಾಶಿವ - ಸರಿ ಕಣೆ ಮಹರಾಯ್ತಿ .... ಮಾಡ್ತೀನಿ....ಇದೊ ಈಗ ಕಾಫಿ ಮುಗಿಸಿದೆ....ಈಗ ವಾಕ್ ಗೆ ಹೊರಟೆ....
ವಾಕ್ ಗೆ ಹೊರಟ ಗನ್ಡನನ್ನ ನೋಡ್ತಾ ಸರಸ್ವತಿ ಕಾಫಿಯನ್ನ ಕುಡಿದು ಮುಗಿಸಿ ಅಡುಗೆ ಮನೆ ಕಡೆ ಹೋರಟಳು....ಹೇಗೋ ಮಗ ವೀಕ್ ಯನ್ಡ್ ಆದದ್ದರಿನ್ದ ೯ ಗನ್ಟೆಗೆ ಮುನ್ಚೆ ಏಳೊಲ್ಲ.... ಅದಕ್ಕೆ ಇನ್ನು ೩೦ ನಿಮಿಷ ಇದೆ ಎನ್ದು ಕೊನ್ಡು ತನ್ನ ಕೆಲಸದಲ್ಲಿ ಮಗ್ನಳಾದಳು......
ಇತ್ತ ರಾಮು ತನ್ನ ಮನದ ಹೊಯ್ದಾಟದಿನ್ದ ಬೇಗನೆ ಎದ್ದು , ಹಾಸಿಗೆ ಮೇಲೇ ಹಾಗೆ ಮಲಗಿ ರೂಫ್ ನೊಡ್ತಾ ಇದ್ದ...
೯ ಗನ್ಟೆಗೆ ಸರಿಯಾಗಿ ಸರಸ್ವತಿ ರಾಮುವನ್ನು ಏಳಿಸಲು ಅವನ ರೂಮಿಗೆ ಬನ್ದು ’ ರಾಮು ಏಳು ಮಗು, ನಿಮ್ಮ ತನ್ದೆ ಸ್ನೇಹಿತರು ಬರೋ ಸಮಯ ಆಗ್ತಾ ಇದೆ, ಎದ್ದು ready ಅಗಪ್ಪ’
ರಾಮು - ಸರಿ ಅಮ್ಮ, ಎಷ್ಟು ಗನ್ಟೆಗೆ ಬರ್ತಾರಮ್ಮ ಅವರು
ಸರಸ್ವತಿ - ೧೦ ಗನ್ಟೆಗೆ ಕಣೊ, ಸೋಲಾರ್ ಇನ್ದ ಬಿಸಿಬಿಸಿ ನೀರು ಬರ್ತಾ ಇದೆ, ಎದ್ದು ಸ್ನಾನ ಮಾಡು
ರಾಮು - ಸರಿನಮ್ಮ, ಸ್ನಾನ ಮಾಡಿ ಬರ್ತೀನೆ. ಬೇರೆ ಏನಾದ್ರು ಕೆಲಸ ಇದ್ರೆ ಹೇಳು ಮಾಡ್ತೀನಿ
ಸರಸ್ವತಿ - ಏನೂ ಇಲ್ಲಪ್ಪ , ನೀನು ರೆಡಿ ಆಗಿ ಬನ್ದ್ರೆ ಅಶ್ಢ್ತು ಸಾಕು. ಬರ್ತಾರಲ್ಲ ಅವರ ಜೊತೆಯೆ ತಿನ್ಡಿ....ಇನ್ನೆನು ನಿಮ್ಮಪ್ಪ ಕೂಡ walking ಮುಗಿಸಿ ಬರ್ತಾರೆ.......
ರಾಮು - ಆಯ್ತಮ್ಮ
೧೦ ಗನ್ಟೆ ಆಗ್ತಾ ಇದ್ದ ಹಾಗೆ ರಾಮು ಹ್ರುದಯದ ಬಡಿತ ಕೂಡ ಹೆಚ್ಚಾಗ್ತಾ ಇತ್ತು. ತನ್ನ ಮನಸಿನಲ್ಲಿದ್ದ ಹೋಯ್ದಾಟವನ್ನು ಯಾರ ಮುನ್ದೆ ಕೂಡ ಹೇಳಲಾರದ ಸ್ಥಿತಿ ಅವನದು.
೧೦.೦೫ಕ್ಕೆ ಸರಿಯಾಗಿ ಸದಾಶಿವರಾಯರ ಸಹೋದ್ಯೋಗಿ ಚನ್ದ್ರಶೇಖರ್, ಅವರ ಪತ್ನಿ ಪಾರ್ವತಿ, ಮಗಳು ನಳಿನಿ, ಸದಾಶಿವರಾಯರ ಮನೆ ತಲುಪಿದರು. ಸರಸ್ವತಿ , ಪಾರ್ವತಿ ಹಾಗು ನಳಿನಿಯನ್ನು ಅವರ ಸನ್ಗಡ ಓಳಗಡೆಗೆ ಕರೆದುಕೋನ್ಡು ಹೋದರು. ಸದಾಶಿವ, ಚನ್ದ್ರಶೇಖರ್ ಹಾಗು ರಾಮು, ಮನೆಯ ಮುನ್ದೆ ಇರುವ ಲಾನ್ ನಲ್ಲಿ ಕುಳಿತರು.
ನಳಿನಿ ನೋಡಲು ಮುದ್ದಗಿದ್ದ ಹೆಣ್ಣುಮಗಳು. ಅದರೆ ರಾಮು ಯವುದೇ ತರಹದ ವಿಷೇಶವಾದ ಆಸತಿಯನ್ನು ತೊರಿಸದಿದುದನ್ನು ಸರಸ್ವತಿ ಗಮನಿಸಿದರು. ಅದರೆ ನಳಿನಿ ರಾಮುವನ್ನು ಮೆಚ್ಚಿದ್ದಳು ಎಮ್ಬುದನ್ನು ಕೂಡ ಗಮನಿಸಿದ್ದರು. ಸದಾಶಿವರು ಕೂಡ ಇದನ್ನೆ ಗಮನಿಸಿದ್ದರು. ಅದರು ಬನ್ದವರ ಮುನ್ದೆ ಏನು ಕೇಳುವುದು ಬೇಡವೆನ್ದು ಸುಮ್ಮನಾದರು. ಸರಸ್ವತಿಯವರು ರಾಮು, ನಳಿನಿಯನ್ನು ಕೆಲಸಮಯ ಮಾತಾಡಲು ಅನುವು ಮಾಡಿಕೊಟ್ಟರು. ನಳಿನಿಯೊಡನೆ ರಾಮು ಸ್ನೆಹಪರವಾಗಿಯೆ ನಡೆದುಕೊನ್ಡನು. ತನ್ನ ಮನದ ಹೋಯ್ದಾಟವನ್ನು ಯಾರೆದುರಿಗೂ ತೋರಿಸಲಿಲ್ಲ. ಆತಿಥ್ಯ ಚೆನ್ನಾಗಿಯೇ ನಡೆಯಿತು. ಮಧ್ಯಾನ್ಹದ ಹೊತ್ತಿಗೆ ಚನ್ದ್ರಶೇಖರ್ ಅವರ ಪರಿವಾರ ಹೊರಟಿತು. ರಾಮು ಹೊರೆತು ಎಲ್ಲರು ಈ ಭೇಟಿ ಇನ್ದ ಸನ್ತಸ ಗೊನ್ಡಿದ್ದರು.
ಅವರಎಲ್ಲರು ಹೋರಟ ಮೇಲೆ, ಸದಾಶಿವ ಹಾಗು ಸರಸ್ವತಿ , ಮಗನ ರೂಮಿಗೆ ಬನ್ದರು. ಕಿಟಕಿಯ ಬಳಿ ದೂರದ ಆಗಸ ನೋಡುತ್ತ ನಿನ್ತು ಇದ್ದು ರಾಮು. ಹಾಸಿಗೆ ಮೇಲೆ ಸರಸ್ವತಿ, ಪಕ್ಕದಲ್ಲೆ ಇದ್ದೆ ಖುರ್ಚಿ ಮೇಲೆ ಸದಾಶಿವ ಕುಳಿತರು. ಮೌನವನ್ನು ಮುರಿಯುತ್ತಾ
ಸದಾಶಿವ - ರಾಮು , ನಳಿನಿ ಬಗ್ಗೆ ನಿನ್ನ ಅನಿಸಿಕೆ ಏನು.
ರಾಮು - ನಳಿನಿ ಒಳ್ಳೆ ಹುಡುಗಿ ಅಣ್ಣ
ಸದಾಶಿವ - ನೋಡೋಕು ಚೆನ್ನಗಿ ಇದ್ದಾಳಾಲ್ಲವೆ
ರಾಮು - ಹೌದಣ್ಣ
ಸದಾಶಿವ - ಹಾಗದ್ರೆ ನಮ್ಮ ಒಪ್ಪಿಗೆ ಇದೆ ಈ ಸಮ್ಬನ್ದಕ್ಕೆ ಅನ್ತ ಹೇಳಲೆ?
ರಾಮು - ಅವಳಿಗೆ ನನಗಿನ್ತ ಒಳ್ಳೆ ಗನ್ಡೇ ಸಿಗುತ್ತೆ ಅಣ್ಣ. ನನಗೆ ಈಗಲೆ ಮದುವೆ ಆಗುವ ಮನಸಿಲ್ಲ
ಸದಾಶಿವ - ನೀನು ಹೇಲ್ತೀಯಪ್ಪ. ಆದರೆ ತನ್ದೆ ತಾಯಿಯರಾಗಿ ನಮಗು ಕೆಲವು ಜವಾಬ್ದಾರಿ ಇರುತ್ತದೆ ಅಲ್ಲವೆ. ಮತ್ತೆ ಸರಿಯಾದ ಸಮಯಕ್ಕೆ ಮದುವೆ ಆದರೆ ನಿನಗು ಒಳ್ಳೆಯದೆ ಅಲ್ಲವೆ.
ಸರಸ್ವತಿ - ನಿನ್ನ ವಯಸ್ಸಿನ ರಾಜೇಶನಿಗು ಸಹ ಮದುವೆ ಆಗ್ತಾ ಇದೆ ಅಲ್ಲವೆ. ನಮಗು ವಯಸಾಗ್ತಾ ಇದೆ ಅಲ್ವಪ.....
ರಾಮು - ಅಮ್ಮ, ಅಣ್ಣ , ನಾನು ಮದುವೆ ಆಗಲು ಸಿದ್ದವಾದಾಗ ನಾನೆ ಹೇಳ್ತೀನಿ
ಸದಾಶಿವ - ಈ ಮಾತನ್ನ ನೀನು ಕಳೆದ ೩-೪ ವರ್ಷಗಳಿನ್ದಾ ಹೇಳ್ತಾ ಇದ್ದಿ. ಈಗಲೇ ತುನ್ವಾ ತಡ ಅಗಿದೆ. ಇನ್ನು ನಾವು ನಿನ್ನ ಮಾತಿಗೆ ಕಾಯಲಾರೆವು.
ನಾನು ಚನ್ದ್ರಶೇಖರ್ ಅವರಿಗೆ ಹೇಳಿ ಕಳಿಸ್ತೀನಿ. ಬರೋ ತಿನ್ಗಳು ನಿನ್ನ ಮದುವೆ ಕೂಡ ಆಗಿಹೋಗಲಿ.
ರಾಮು - ಅಣ್ಣ ನನ್ನ ಬಲವನ್ತ ಮಾಡಬೇಡಿ. ದಯವಿಟ್ಟು ನನಗೆ ಇನ್ನು ಸ್ವಪ್ಲ ಸಮಯ ಕೋಡಿ.
ಸರಸ್ವತಿ - ಏನೂ ಅನ್ದ್ರೆ , ಅವನು ಇಸ್ಟು ಕೇಳ್ತಾ ಇದ್ದನಲ್ಲಾ, ಇನ್ನು ಸ್ವಲ್ಪ ದಿನ ಕಾಯೋಣ
ಸದಾಶಿವ - ಆಗೋಲ್ವೆ.. ಇವನಿಗೆ ೨-೩ ವರ್ಷ ಕೊಟ್ಟು ಕಾದಾಯ್ತು. ಇನ್ನು ಕಾಯೋಕೆ ಅಗೊಲ್ಲ.... ಈಗ ಇನ್ತ ಸಮ್ಬನ್ಧ ಬಿಟ್ಟರೆ ಮತ್ತೆ ಸಿಗುತ್ತೆ ಅನ್ನೊ ನಮ್ಬಿಕೆ ನನಗೆ ಇಲ್ಲ.
ನಮ್ಮ ರಾಮು ಹೀಗೆ ಎನ್ದೂ ಇರಲಿಲ್ಲ. ತನ್ದೆ ತಾಯಿ ಹೇಳಿದ ಮಾತನ್ನು ಎನ್ದೂ ತಿರಸ್ಕರಿಸುತ್ತಿರಲಿಲ್ಲ....ಈಗ ಅವನಿಗೆ ತನ್ದೆ ತಾಯಿ ಮಾತು ರುಚಿಸುತ್ತಿಲ್ಲ....
ಏನೋ ನಿಸ್ಚಯಿಸಿಕೊನ್ಡನ್ತೆ ರಾಮು - ಅಣ್ಣ ನೀನು ಈ ಮದುವೆಯ ಭಗ್ಯೆ ಮುನ್ದುವರಿಯಿರಿ
ಈ ಮತನ್ನು ಕೇಳಿ ಸದಾಶಿವ ಸರಸ್ವತಿಯರು ಸನ್ತೊಷಗೊನ್ಡರು. ನೋಡಿದಯ ಹೇಗೆ ಒಪ್ಪಿಸಿದೆ ಅನ್ನೊ ಹಾಗೆ ಸರಸ್ವತಿಯನ್ನು ನೋಡಿದರು ಸದಾಶಿವ. ಇಬ್ಬರು ಕೇಳಗೆ ಇಳಿದರು.
ರಾಮು ಕೂಡ ಕೆಳಗೆ ಬನ್ದು - ಅಮ್ಮ ನಾನು ರಾಜೇಶನ ಮನೆಗೆ ಹೋಗಿ ಬರುತ್ತೆನೆ ಅನ್ದ್ದ.
ಮಗ ಹೋರಟ ಮೇಲೆ ಸರಸ್ವತಿ ಮಗನ ಮದುವೆಗೆ ಏನೇನು ಮಾಡಬೇಕು ಅನ್ನ್ವುದನು ಸಿದ್ದಮಾಡಿಕೊಳ್ಳಲು ಅನುವಾದರು. ಇತ್ತ ಸದಾಶಿವರು ಚನ್ದ್ರಶೇಖರ್ ಅವರಿಗೆ ಕರೆ ಮಾಡಿ ತಮ್ಮ ಒಪ್ಪಿಗೆ ಇರುವುದಾಗಿಯು, ಮದುವೆಯ ಭಗ್ಯೆ ಮಾತಾಡಲು ಅವರ ಮನೆಗೆ ಹೋರಟರು.
ರಾತ್ರಿ ೯ ಗನ್ಟೆಗೆ ರಾಮು ಮನೆಗೆ ಬನ್ದ. ಮುಖ ಕಳೆಗುನ್ದಿತ್ತು. ಸರಸ್ವತಿ ಗಮನಿಸಿದ್ದರು. ಬೆಳಗ್ಗೆ ನಡೆದ ವಿಷಯದಿನ್ದ ಮಗ ನೋನ್ದಿದ್ದಾನೆ ಎನ್ದುಕೊನ್ಡು ಸುಮ್ಮನಾದರು.
ಮಾರನೆ ದಿನ ಭಾನುವಾರ. ಪ್ರತಿ week end ಹಾಗೆ ಮಗನು ೯ಕ್ಕೆ ಏಳಲಿಲ್ಲ. ಸರಿ ೧೦ಕ್ಕೆ ಹೊಗಿ ಏಳಿಸಲು ಸರಸ್ವತಿ ರಾಮುವಿನ ರೂಮಿಗೆ ಹೋದರು. ಅಲ್ಲಿದ್ದ ದ್ರುಶ್ಯವನ್ನು ನೋಡಿ ಧಿಗ್ ಬ್ರಾನ್ತಿ ಗೊನ್ಡು ಗನ್ಡನನ್ನು ಚೀರಾಡಿ ಕೂಗಿಕೊನ್ಡರು. ಪತ್ನಿ ಚೀರಿದ್ದನು ಕೇಳಿದ ಸದಾಶಿವ ಕೂಡ ಓಡಿಬನ್ದರು. ಒಬ್ಬನೇ ಮಗನು ನಿಸ್ತೇಜನಾಗಿ ನೇಣಿಗೆ ಶರಣಾಗಿದ್ದನ್ನು ಕನ್ಡರು. ದಮ್ಪತಿಗಳು ಗೋಳಾಡಿದರು. ಮಗನಿಗೆ ಮದುವೆ ಮಾಡಿಕೋ ಎನ್ದಿದ್ದೆ ತಪ್ಪಯ್ತೆ ಎನ್ದು ಸನ್ಕಟ ಪಟ್ಟರು. ಈ ದಿನ ನೋಡಲು ಮಗನನ್ನು ಸಾಕಿ ಸಲಹಿದವೆ. ಹೆತ್ತವರ ಮಾತು ಇಶ್ಟು ಅಪಥ್ಯವಾಯಿತೆ. ಇನ್ನು ಈ ಮುಪ್ಪಿನಲ್ಲಿ ತಮಗೆ ಆಗುವರಾರು. ಸದಾಶಿವರಾಯರು ಆ ದುಖ್ಹದಲ್ಲಿ ರಾಜೇಶನಿಗೆ ಕರೆ ಮಾಡಿ ನಡೆದುದ್ದನ್ನು ತಿಳಿಸಿದರು. ಸುದ್ದಿಯನ್ನು ಕೇಳಿದ್ದರು ನಮ್ಬಲು ರಾಜೇಶನಿಗೆ ಸಾಧ್ಯವಗಲೇ ಇಲ್ಲ. ತತ್ಕ್ಶಣವೆ ರಾಮುವಿನ ಮನೆಗೆ ಹೋರಟ. ರಾಮುವಿನ ರೂಮಿನಲ್ಲಿ ರಾಮು ಬರೆದಿಟ್ಟ ಕೋನೆಯ ಪತ್ರ ಸಿಕ್ಕಿತು ರಾಜೇಶನಿಗೆ. ಪತ್ರದ ಒಕ್ಕಣೆ ಹೀಗಿತ್ತು
’ ಪ್ರೀತಿಯ ಅಪ್ಪ ಅಮ್ಮನಿಗೆ
ನಾನು ಈ ಮದುವೆ ಅನ್ನು ಮಾಡಿಕೋಳ್ಳಲಾರೆ. ಅದರೆ ನಿಮಗೂ ದುಖ್ಹವನ್ನು ನೀಡಲಾರೆ. ಅದರೆ ಈ ಸಮಾಜ ನಾನು ಪ್ರೀತಿಸಿದ ವ್ಯಕ್ಥಿಯನ್ನು ಮದುವೆಯಾಗಲು , ಅವರ ಜೊತೆ ಬದುಕಲು ನನಗೆ ಅವಕಾಶ ನೀಡದು. ಅದರೆ ಮದುವೆ ಆಗಿ ನೀವು ತೊರಿಸಿದ ಹೆಣ್ಣಿಗೆ ಕೂಡ ಅನ್ಯಾಯ ಮಾಡಲಾರೆ. ಇದೆಲ್ಲದಕ್ಕು ನನ್ಗೆ ಇದೆ ನನಗೆ ತೊರಿದ ಉತ್ತರ. ನಿಮ್ಮ ಒನ್ಟಿಯಾಗಿ ಬಿಟ್ಟು ಹೊಗುತ್ತಿರುವ ನಿಮ್ಮ ಅವಿಧೆಯ ಮಗ ರಾಮು. ದಯವಿಟ್ಟು ನನ್ನನು ಕ್ಶಮಿಸಿ, ನಿಮ್ಮನ್ನು ಈ ದುಖ್ಖಕ್ಕೆ ಈಡು ಮಾಡಿ ಹೋಗುತ್ತಿರುವೆ.
ಪ್ರೀತಿಯ ಗೆಳೆಯ ರಾಜೇಶ,
ನಿನ್ನ ಬಿಟ್ಟು ನನ್ಗೆ ಇನ್ಯವ ಗೆಳಯನಿಲ್ಲ. ನನ್ನ ತನ್ದೆ ತಾಯಿಯರನ್ನು ನೀನೆ ನೊಡಿಕೊ. ನನ್ನ insurence ಮತ್ತು ಇನ್ನಿತರೆ ಗಲಿನ್ದ ಹಣ ಬರುವುದು. ದಯವಿಟ್ಟು ನೀನೆ ನಿನ್ದು ಅದನ್ನು ಇವರು ಮುನ್ದೆ ಸುಖವಾಗಿ ಇರಲು ವ್ಯವಸ್ತೆ ಮಾಡಬೇಕು. ನಿನಗೂ ತಿಳಿಸದೆ ಹೋಗುತ್ತಿರುವ ನಿನ್ನ ಈ ಗೆಳೆಯನ್ನು ಕ್ಶಮಿಸು
ಇನ್ತಿ
ನಿಮ್ಮ ರಾಮು ’
ಕಾಗದ ಓದಿ ಎಲ್ಲರು ನೊನ್ದುಖೊನ್ಡರು. ಅದರೆ ಮುನ್ದಿನದನ್ನು ಆಳೊಚಿಸಿ ರಾಜೇಶ , police stationಗೆ ಕರೆ ಮಾಡಿ , ನಡೆದ ವಿಷಯವನ್ನು ತಿಳಿಸಿ, ರಾಮು ಬರೆದ ಕಾಗದವನ್ನು ತೋರಿಸಿ, ಸದಾಶಿವರು ನೆನ್ನೆ ನಡೆದ ಘಟನೆಯನ್ನು ಪೋಲಿಸರಿಗೆ ಅರುಹಿದರು. legal ಕಾರ್ಯಗಳನ್ನು ಮುಗಿಸಿದ. ಯಾರ್ಯಾರಿಗೆ ಹೇಳಿ ಕಳಿಸಬೇಕೋ ಎಲ್ಲರಿಗು ಹೇಳಿ ಕಳಿಸಿದ. ರಾಮು ಮೊಬೈಲ್ ಇನ್ದ ಅವನ ಸ್ವೀಟು ನಮ್ಬರಿಗೆ ಕರೆ ಮಾಡಲು ಪ್ರತ್ನಿಸಿದ. ಆತ್ತಲಿನ್ದ ’ ನೀವು ಕರೆ ಮಾಡಿದ ಚನ್ದಾದಾರು , ತಮ್ಮ ದೂರವಾಣಿಯನ್ನು ಆರಿಸಿದ್ದರೆ’ ಎಮ್ಬ ಸುದ್ದಿಯನ್ನು ಹೇಳಿತು. ’please call me when you see this message' ಎನ್ದು ಆ ನಮ್ಬರಿಗೆ SMS ಕಳುಹಿಸಿದ. ಇದೆಲ್ಲರ ಮದ್ಯೆ ಸರಸ್ವತಿಯ ಸನ್ಕಟ ಯಾರಿನ್ದಲು ನೋಡಲು ಆಗಲಿಲ್ಲ. ಓಬ್ಬನೆ ಮಗನನ್ನು ಕಳೆದು ಕೊನ್ಡ ತಾಯಿಯನ್ನು ಯಾರು ತಾನೆ ಸನ್ತೈಸಬಲ್ಲರು. ತಮ್ಮ ಮುದ್ದು ಮಗನ ಗಲ್ಲ ಹಿಡಿದು , ರಾಜೇಶನನ್ನು ಕರೆದು , ನೋಡೊ ರಾಮು, ರಾಜೇಶ ಬನ್ದ. ಏಳಪ್ಪ. ಸುಮ್ಮನೆ ನಮ್ಮನ್ನ ಕಾಡಿಸಬೇಡ. ನೋಡಪ್ಪ ರಾಜೇಶ ಎಸ್ಶ್ಟು ಏಲಿಸಿದರು ಏಳೊಲ್ಲ., ನೀನು ಏಳಿಸಿದರೆ ಏಲ್ತಾನೆ ಇವನು. ಇದನ್ನು ಕೇಳಿ ಅಲ್ಲಿಯವರೆವಿಗು ದುಖ್ಹವನ್ನು ಹಿಡಿದು ಕೊನ್ಡಿದ್ದ ರಾಜೇಶ ಕೂಡ ಮಗುವಿನ ಹಾಗೆ ಸರಸ್ವತಿಯ ಕಾಲಿನ ಮೇಲೆ ಬಿದ್ದು ಅಳತೊಡಗಿದ. ಅದರು ಮಾಡಲೇಬೇಕಾದ ಕಾರ್ಯಗಲನ್ನ ನೆನೆದು ಅದರೆ ಕಡೆಗೆ ಹೊರ್ಟ. ಪೋಲಿಸರು ಎಲ್ಲವನ್ನು FIR ನಲ್ಲಿ ದಾಖ್ಹಲಿಸಿಕೊನ್ಡು ಹೇಣವನ್ನು POST MORTEMಗೆ ಕಳಿಸಿಕೊಟ್ಟರು. ೨-೩ ಗನ್ಟೆಯಲ್ಲಿ ಹೆಣ ಮನೆಗೆ ಬನ್ತು. ಬೆಳಗ್ಗೆ ಇದ್ದ ಮಗ ಈಗ ಹೆಣ. ಸದಾಶಿವರು ಮರುಗಿದರು. ಪುತ್ರ ಶೋಕಮ್ ನಿರನ್ತರಮ್....
ಸನ್ಜೆಯ ವೇಳೆಗೆ ಎಲ್ಲ ಕಾರ್ಯಗಳು ಮುಗಿದವು. ಅನಿರೀಕ್ಶಿತವಾಗಿ ಎರಗಿದ ಆಘ್ಹಾತತಿನ್ದ ಇನ್ನು ಸದಾಶಿವ-ಸರಸ್ವತಿ ಹೊರಬನ್ದಿರಲಿಲ್ಲ. ಅವರನ್ನು ಒನ್ಟೀಯಾಗಿ ಬಿಡಲು ಮನಸ್ಸೊಪ್ಪದೆ ಅವರ ಮನೆಯಲ್ಲಿಯೆ ಆ ರಾತ್ರಿ ರಾಜೇಶ ಉಳಿದುಕೊನ್ಡ. ಎಲ್ಲಿ ನೋಡಿದರು ಅವನಿಗೆ ರಾಮುವಿನ ನೆನಪೆ. ಅವನಿಗೆ ಎನೆನೊ ಯೊಚನೆಗಳು. ತನ್ದೆ ತಾಯಿಗಳು ತೊರಿಸಿದ ಹೆಣ್ಣು ಒಪ್ಪಿಗೆಯಿಲ್ಲದುದಕ್ಕೆ ಆತ್ಮ ಹತ್ಯ ಮಾಡಿಕೋಲ್ಲುವನೆ. ಇಲ್ಲ. ಸ್ವೀಟಿಯನ್ನು ಕೂಡ ಬಿಟ್ಟನೆ. ಪ್ರೀತಿಸಿದ ತನ್ದೆ ತಾಯಿ, ಸ್ವೀಟಿ, ತಾನು, ಹೀಗೆ ಎಲ್ಲರನ್ನ್ನು ಏಕೆ ನೋಯಿಸಿದ ರಾಮು. ಅದರೆ ಕಾಗದದಲ್ಲಿ ಏಕೇ ಹಾಗೆ ಬರೆದ. ತಾನು ಪ್ರೀತಿಸಿದ ವ್ಯಕ್ತಿ ಜೊತೆ ತಾನು ಇರಲು ಈ ಸಮಾಜ ಬಿಡದು ಎನ್ದು. ಖನ್ಡಿತ ರಾಮು ಒಲ್ಲೆ ನಿರ್ಧಾರ ತಗೆದು ಕೊಳ್ಳಲಿಲ್ಲ. ನೋಡೊಣ ಹೇಗಿದ್ದರೂ ಸ್ವೀಟುಗೆ SMS ಮಾಡಿದ್ದೇನೆ. ಅವರ ಜೊತೆ ಮಾತಾಡಿದ ಮೇಲೆ ಎಲ್ಲ ಗೊತ್ತಗುವುದು. ಏನೇನೊ ಪ್ರಶ್ನೆಗಳು ಅವನನ್ನು ರಾತ್ರಿಯೆಲ್ಲ ಕಾಡಿದವು.
ಆ ರಾತ್ರಿ ಕಳೆದು ಬೆಳಗಾಗುವುದು ದೊಡ್ಡ ಯುಗವೆ ಕಳೆದನ್ತೆ ಅಗಿತ್ತು ಎಲ್ಲರಿಗು. ಅದರೆ ಜೀವನ ಯಾರಿಗು ಎಲ್ಲಿಯು ನಿಲ್ಲುವುದಲ್ಲ.
ಬದುಕು ಜಟಕಾ ಬನ್ಡಿ, ವಿಧಿ ಅದರ ಸಾಹೇಬ
ಮದುವೆಗೋ ಮಸಣಕೋ ಹೊಗೆನ್ದ ಕಡೆಗೆ ಹೋಗು
ದಿನವೆಲ್ಲ ಸರಸ್ವತಿಗೆ ಮಗನಿಗೆ ತಾನು ತಿನ್ಡಿ ಕೊಟ್ಟನ್ತೆ, ಅವನು ತಿನ್ದದನ್ತೆ ಭಾಸವಾಗುತ್ತಿತ್ತು. ಸದಾಶಿವರು ದುಖ್ಹಗೊನ್ದಿದ್ದರು, ತಮನ್ನು ತಾವು ಸನ್ತೈಸ್ಕುಕೊನ್ಡಿದ್ದರು. ಅದರೆ ಸರಸ್ವತಿಯವರ ಹೆನ್ಗರಳು ಇದ್ದೊಬ್ಬ ಮಗನು ಈಗಿಲ್ಲ ಎಮ್ಬುದನ್ನು ಅರಗಿಸಿಕೊಳ್ಳಲು ಸಿದ್ದವಿರಲಿಲ್ಲ. ಇದೆಲ್ಲವನ್ನು ಕನ್ಡು ರಾಜೇಶನು ಮನಸಿನ್ನಲಿಯೆ ಕಣ್ಣೀರಿಟ್ಟನು.
Subscribe to:
Post Comments (Atom)
No comments:
Post a Comment