Sunday, June 21, 2009

ಸನ್ಢ್ಯಾ ಕಾಲ

ಮುನ್ನುಡಿ : ಇದು ನನ್ನ ಊಹ ಕಥನ. ಇದು ನನ್ನ ಮೊದಲ ಕಥೆ. ಪ್ರೆಮ ಕಥೆಗಳನ್ನು ಬರೆಯು ಆಸೆ ಇದ್ದರು, ಸಮಾಜದ ವಿವಿಧ ಮಝ್ಹಲುಗಲಲ್ಲಿ ನದೆಯುವ ಕಥೆಗಲನ್ನು ಬರೆಯುವ ಆಸೆ.

ಅದು ೧೯೯೦ರ ಬೆನ್ಗಳೂರು. ಜುಲೈ ಮಾಹೆಯ , ತಮ್ಪಗಿನ ಹವಾಮಾನ. ಪ್ರಕ್ರುತಿ ಪ್ರಿಯರ ನೆಚ್ಚಿನ ನಗರ .ಸನ್ಜೆ ೫ ಗನ್ಟೆ ಆಗ್ಥ ಇತ್ತು . ಶಿವರಾಮಯ್ಯನವರು ಎನ್ದಿನನ್ತೆ ಮನೆಯ ಹತ್ತಿರ ಇರುವ ಉದ್ಯಾನವನದ ಕಡೆ ಹೊರಟರು. ಗೌರಮ್ಮನವರು ಹೋದನನ್ತರ ಶಿವರಾಮಯ್ಯನವರು ಈ ಬದಲಾವಣೆಯನ್ನು ತಮ್ಮ ಜೀವನ ಶೈಲಿಯಲ್ಲಿ ತನ್ದುಕೋನ್ದರು. ಇಲ್ಲಿ ಇರುವ ಕೆಲವು ದಿನಗಳನ್ನು ಕಳೆಯುವ ಸಲುವಾಗಿ ಈ ತರಹದ ಹಲವಾರು ಬದಲಾವಣೆಗಳನ್ನು ಮಾಡಿಕೊನ್ದಿದ್ದರು. ಉದ್ಯಾನ ವನದಲ್ಲಿ ಎನ್ದಿನನ್ತೆ ಮಕ್ಕಳು ಆಡುತಲಿದ್ದರು. ಅವರ ಸನ್ಗಡ ಬನ್ದನ್ತಾ ವ್ರುದ್ದರು ತಮ್ಮ ಸಹವರ್ತಿಗಳ ಸನ್ಗಡ ಕುಷಲೋಪರಿ ನಡೆಸುತ್ತಲಿದ್ದರು. ಉದ್ಯಾನವನದಲ್ಲಿನ ಸೊಬಗು ವರ್ಣಿಸಲಸಾದ್ಃಯ ವಾಗಿದ್ದಿತು. ಬಣ್ಣ ಬಣ್ಣದ ಹೂಗಳು , ಹಸಿರು ನೆಲ ಹಾಸಿಗೆ, ಅವುಗಳ ನಡುವೆ ತಮ್ಪಗಿನಿ ಕಲ್ಲು ಬೆನ್ಚು. ಇವನ್ನೆಲ್ಲ ನೋಡಿದರೆ ಇದೇ ಸ್ವರ್ಗವೇನೋ ಎಮ್ಬನ್ತೆ ಇತ್ತು.

ಉದ್ಯಾನವನಕ್ಕೆ ಬನ್ದ ನನ್ತರ ಶಿವರಾಮಯ್ಯನವರು ಅಲ್ಲೆ ಖಾಲಿ ಇದ್ದ ಕಲ್ಲು ಬೆನ್ಚಿನ ಮೇಲೆ ಕುಳಿತರು. ದೂರದಲ್ಲಿ ಆಡುತಲಿದ್ದ ಮಕ್ಕಳನ್ನು ನೋಡಿ ಅದೇನೋ ನೆನಪಾದನ್ತೆ ಆಯ್ತು.
ತಾವು ಮಕ್ಕಳಾಗಿದ್ದಗಿನ ದಿನಗಳನ್ನು ನೆನೆದು ಸನ್ತಸಗೊನ್ಡರು, ಮತ್ತೆ ತಮ್ಮ ಮೊಮ್ಮಕ್ಕಳು ತಮ್ಮ ಸನ್ಗಡ ಇರದುದಕ್ಕೆ ನಿಟ್ಟುಸಿರು ಬಿಟ್ಟರು. ಶಿವರಾಮಯ್ಯನವರಿಗೆ ಇಬ್ಬರು ಗನ್ಡು ಮಕ್ಕಳು.
ಮಧ್ಯಮ ವರ್ಗದ ದಮ್ಪತಿಗಳು ಹೇಗೆ ಮಕ್ಕಳನ್ನು ಸಾಕುವರೊ ಹಾಗೆಯೆ ಸಾಕಿದರು. ಮಕ್ಕಳು ಬುದ್ದಿವನ್ತರೂ, ಗುಣವನ್ತರೊ ಆಗಿ ಬೆಳೆದರು. ರೆಕ್ಕೆ ಬನ್ದಮೇಲೆ ಮರಿ ಹಕ್ಕಿಗಳು ತಾಯಿ ಹಕ್ಕಿಯ ಬಳಿಯಲ್ಲಿ ಇರುವವೆ? ತಮ್ಮ ಕಾಲ ಮೇಲೆ ನಿಲ್ಲಲು ಮಕ್ಕಳು ದೂರದ ದೇಶಗಳಿಗೆ ಹೋಗಿ ನೆಲಸಿದರು. ಕೈ ತುಮ್ಬಾ ಹಣ ಸಮ್ಪಾದಿಸಿದರು. ತನ್ದೆ ತಾಯಿಗಳಿಗೆ ಹಣದಿನ್ದ ಏನೇನು ಸೌಕರ್ಯಗಳು ಸಾಧ್ಯವೊ ಅದೆಲ್ಲಾ ಮಾಡಿದರು. ಅದರೆ ಅವರಿಗೆ, ತಾವು ನೆಲೆ ನಿನ್ತ ದೇಶದಿನ್ದ ತಮ್ಮ ನಾಡಿಗೆ ಬರಲು ಮನಸು ಬರದು. ಮೂರು ತಿನ್ಗಳ ಹಿನ್ದೆ ಗೌರಮ್ಮನವರು ಇಹ ತ್ಯಜಿಸಿದಾಗ ಅವರ ಬಳಿಯಲ್ಲಿ ಮಕ್ಕಳು ಅಳುತ್ತಲಿದ್ದರು. ಅದರೆ ಗೌರಮ್ಮನವರಿಗೆ ತಾವು ಶಿವನ ಸನ್ನಿದಿ ಸೆರುವುದು ಸನಿಹದಲ್ಲೆ ಇದೆ ಎನ್ದು ತಿಳಿದಿದ್ದು, ಮಕ್ಕಳನ್ನು ತಾವೆ ಸನ್ತೈಸುತಲಿದ್ದರು.
ರಾತ್ರಿ ಎಲ್ಲ ಮಲಗಿದ್ದಗ ಗನ್ಡನೊದಿಗೆ " ಎನೂಅನ್ದ್ರೆ , ನಾನು ಹೋದ ಮೇಲೆ ನಿಮ್ಮ ಹಾದಿ ಏನು? ಮಕ್ಕಳು ಇಲ್ಲಿಗೆ ಬರುವ ಹಾಗೆ ಕಾಣುವುದಿಲ್ಲ. ನೀವು ಏತಕ್ಕೆ ಮಕ್ಕಳ ಬಳಿಗೆ ಹೋಗಿ ಇರಕೂಡದು?’
ಶಿವರಾಮಯ್ಯ ’ ಗೌರು, ಆ ಸಮಯ ಬನ್ದಾಗ ನೊಡಿಕೊನ್ದರಾಯ್ತು. ನೀನೇತಕ್ಕೆ ಕೆಡಕು ಮಾತನ್ನಾಡುವೆ? ಹಾಗೆ ಎನ್ದಿಗು ಆಗುವುದಿಲ್ಲ. ಹಾಗೆ ಆಗುವ ಕಾಲಕ್ಕೆ ನೀನು ನಾನು ಇಬ್ಬ್ರು ಒತ್ತಿಗೆ ಹೋಗುವ’
ಇಬ್ಬರು ಮೌನವಾದರು.
ಬೆಳಗಾಯ್ತು.
ರಾತ್ರಿಯಲ್ಲಿ ಗೌರಮ್ಮನವರು ಇಹವನ್ನು ತ್ಯಜಿಸಿದ್ದರು.
ನಡೆಯಬೇಕಾದ ಕಾರ್ಯಗಳೆಲ್ಲವು ಸಾನ್ಗವಾಗಿ ನಡೆಯಿತು.


ಮಕ್ಕಲೆಲ್ಲ ಬೆಳಗ್ಗಿನಿನ್ದ ಅತ್ತು ಕರೆದು ದಣಿದಿದ್ದ್ರು. ಆ ರಾತ್ರಿ ಶಿವರಾಮಯ್ಯನವರನ್ನು ಹೊರೆತುಪಡಿಸಿ ಮಿಕ್ಕವರೆಲ್ಲರು ಒಬ್ಬೊಬ್ಬರಾಗಿ ನಿದ್ರೆಗೆ ಜಾರಿದರು. ಮುನ್ನ ದಿನ ಮಡದಿಯ ಜೊತೆ ನಡೆದ ಮಾತುಗಳನ್ನು ನೆನೆಯುತ್ತಲಿದ್ದರು ಶಿವರಾಮಯ್ಯ.

ಬೆಳಗಾಯ್ತು, ಮಕ್ಕಳು ತನ್ದೆಯವರ ಬಗೆಗೆ ಯೊಚಿಸುತ್ತ ಇದ್ದರು. ಬೆಳಗ್ಗಿನ walking ಮುಗಿಸಿ ಶಿವರಾಮಯ್ಯ ಮನೆಗೆ ಮರಳಿದಾಗ ಮಕ್ಕಳು ಮುನ್ದೇನು ಮಾಡುವುದು ಎನ್ದಾಗ ಶಿವರಾಮಯ್ಯ ನವರು ತಟಸ್ಥರಾದರು. ಮಕ್ಕಳು ಇಲ್ಲಿಗೆ ಬರಲೊಲ್ಲರು, ತಾನು ಅಲ್ಲಿಗೆ ಹೋಗೆ.. ಕಸ್ಟ ಪಟ್ಟು ಕಟ್ಟಿಸಿದ ಮನೆ, ಮಡದಿಯೊನ್ದಿಗೆ ಅನ್ಯೊನ್ಯದಿನ್ದ ಇದ್ದ ಮನೆ. ಎಸ್ಟೊ ಸನ್ತಸ ಸಮಯಗಲಳಿಗೆ ಇದು ಪ್ರತ್ಯಕ್ಶದರ್ಶಿ. ಹುಟ್ಟಿ ಬೆಳೆದ ನಾಡು. ಹುಟ್ಟಿನಿನ್ದ ಬೆಳೆದು ಬನ್ದಿದ್ದ ಒಡನಾಡಿಗಳ ಸಾನ್ಗತ್ಯ. ಇವೆಲ್ಲವನ್ನು ತೋರೆದು ಕಾಣದೂರಿಗೆ ಹೋಗುವುದೆ? ಯೊಚನಾಲಹರಿಯ ಮಧ್ಯ ಮಕ್ಕಳು ತಮ್ಮ ನಿರ್ಧಾರಕ್ಕೆ ಆತನ್ಕದಿನ್ದಾ ಕಾಯುತ್ತಲಿದ್ದರು. ’ ನನಗೆ ಸನ್ಜೆವರಗೆ ಸಮಯಕೊಡಿ, ಯೊಚಿಸಿ ಹೆಳುತ್ತೆನೆ’ ಎನ್ದು ಎದ್ದು ತಮ್ಮ ನಿತ್ಯಕರ್ಮಗಳಿಗೆ ತೊಡಗಿದರು.
ಸನ್ಜೆ ಮೊದಲ ಬಾರಿಗೆ ತಮ್ಮ ಮನೆಯ ಹತ್ತಿರ ಇರುವ ಉದ್ಯಾನವನಕ್ಕೆ ಬನ್ದರು. ಮನದಲ್ಲಿ ನಡೆಯುತ್ತಿದ್ದ ಕದನಕ್ಕೆ ಅವರು ಒನ್ದು ಉತ್ತರವನ್ನು ಹುಡುಕುವ ಹೊಯ್ದಾಟದಲ್ಲಿ ಇದ್ದರು.
ಅದು ಮೈ ಮಾಹೆ. ಪ್ರಕ್ರುತಿ ಹಸಿರಿನಿನ್ದ ತುಮ್ಬಿತ್ತು. ಕಲ್ಲು ಬೆನ್ಚಿನ ಮೇಲೆ ಕುಳಿತು ಆ ಸವಿಯನ್ನು ಸವಿಯುತ್ತಲಿದ್ದರು. ಮೊನ್ನೆ ಸನ್ಗಾತಿಯೊಡನೆ ನಡೆದ ಮಾತುಗಳನ್ನು ನೆನೆದರು. ಕೊನೆಯ ಕಾಲದವರೆವಿಗು ಸನ್ಗಾತಿಯೊಡನೆ ಇರುವ ಭಾಗ್ಯ ಇರಲಿಲ್ಲವೆ ಎನ್ದು ಮರುಗಿದರು.

ದೂರದಲ್ಲಿ ಇನ್ನೊಬ್ಬರು ವ್ರುದ್ದರು ಮೊಮ್ಮಗನ ಜೊತೆ ಆಡುತ್ತಲಿದ್ದರು. ಮೊಮ್ಮಗನ ಜೊತೆ ಆಡುವ ಲೋಕದಲ್ಲಿ ಮುಳುಗಿ ಹೋಗಿದ್ದರು. ಪ್ರಪನ್ಚವನ್ನೇ ಮರೆತಿದ್ದರು. ಅವರನ್ನು ನೋಡಿದ ಶಿವರಾಮಯ್ಯರಿಗೆ ಅವರನ್ನು ಎಲ್ಲೊ ನೋಡಿದ ಅನುಭವವಾಯ್ತು. ತನ್ನ ಬಾಲ್ಯ ಮಿತ್ರ ಜೊಗಯ್ಯನಿರಬಹುದೆ ಎನ್ದೆನಿಸಿತು. ಆ ತಾತ-ಮೊಮ್ಮಗನ ಬಳಿಗೆ ಹೋಗಿ,”ನಿಮ್ಮನ್ನು ಎಲ್ಲೊ ನೋಡಿದ ಹಾಗಿದೆ. ನೀವು ಕೊರನ್ಗೂರಿನ ಜೊಗಯ್ಯನೆ?’ ಎನ್ದರು. ಅಲ್ಲಿವರ್ಗೆ ತಮ್ಮದೆ ಲೊಕದಲ್ಲಿ ಇದ್ದ ಆ ವ್ರುದ್ದ ಈ ಮಾತನ್ನು ಕೇಳಿ ಶಿವರಾಮಯ್ಯನ್ನು ಗುರುತಿಸಿದ. ಸನ್ತಸಗೊನ್ದ.
ಸುಮಾರು ವರ್ಷಗಳ ಮೇಲೆ ಸನ್ಢಿಸಿದ ಗೆಳೆಯರು ದೇಶಾಭಿರಾಮರಾಗಿ ಮಾತನಾಡುತಲಿದ್ದರು. ಜೊಗಯ್ಯ ಶಿವರಾಮಯನ್ನ ಓರಿಗೆಯಾದರು, ಬಡತನದ ಕಾರಣದಿನ್ದ ಹಳ್ಳಿ ಮುಕ್ಕನಾಗೆ ಬೆಳೆದ. ಅವನ ಮಕ್ಕಳು ಬುದ್ದಿವನ್ತರಾಗಿ ಪಟ್ಟಣಕ್ಕೆ ಬನ್ದು ನೆಲೆಸಿದರು. ತನ್ನ ಪತ್ನಿ ಮರಣಾನನ್ತರ ಮಕ್ಕಳು ಬರಹೇಳಿದಾಗ ಇಲ್ಲಿಗೆ ಬನ್ದುದಾಗಿಯು, ಸೊಸೆ ಮೊಮ್ಮಕ್ಕಳೊನ್ದಿಗೆ ಸನ್ತಸದಿನ್ದ ಇರುವುದಾಗಿಯು ಹೇಳಿದನು. ತಾನು ಹೇಗೆ , ಜಿಗ್ನಾಸೆಗೆ ಬಿದ್ದುದಾಗಿಯು, ಪನ್ತಿ ಹೋದಮೇಲೆ ತಾನು ಇನ್ನೆಸ್ಟು ದಿನ ಇರುವುದು, ಇರುವವರೆಗಾದ್ರು ಮೊಮ್ಮಕ್ಕಳೊನ್ದಿನ್ದೆ ಇರೋಣವೆನ್ದು ಬನ್ದುದಾಗಿಯು ಹೇಳಿದನು.

ಈ ಮಾತನ್ನು ಕೇಳಿ ಶಿವರಾಮಯ್ಯ ತಮ್ಮ ಹೊಇದಾಟದಿನ್ದ ಸಮಾಧಾನ ಸ್ಥಿಥಿಗೆ ಬನ್ದರು. ಜೊಗಯ್ಯ ಹೇಳಿದ ಮಾತಿನಲ್ಲಿ ಅರ್ಥವಿದೆ ಎನ್ದುಕೊನ್ದರು. ಇರುವ ಕೆಲವು ದಿನ್ವಾದರು ತಮ್ಮವರೊನ್ದಿಗೆ ಇರುವುದೇ ಸೂಕ್ಥ ಎನಿಸಿತು. ಜೊಗಯ್ಯ ಈ ದಿನ ದೊರಕಿದುದು ತಮ್ಮ ಭಾಗ್ಯವೆ ಎನ್ದುಕೊನ್ಡರು. ಮನೆಯಲ್ಲಿ ಮಕ್ಕಳು ಕಾದಿರುವುದಾಗಿ ಹೇಳಿ ಮಕ್ಕಳು, ಸೊಸೆಯರು, ಮೊಮ್ಮಕ್ಕಳನ್ನು ಕರೆದು ಇನ್ತೆನ್ದರು ’ ಈ ಜಾಗವನ್ನು ಬಿಟ್ಟು ಬರಲು ತಮಗೆ ಕಷ್ಟವಗಿರುವುದು. ಅದರೆ ಕೊನೆದಿನಗಳು ನಿಮ್ಮ ಎಲ್ಲರ ಸನ್ಗಡ ಇರುವ ಆಸೆ. ನಿಮ್ಮ ಅಭಿಪ್ರಾಯಗಳನ್ನು ಹೇಳಿರಿ’. ತನ್ದೆಯ ಮಾತನ್ನು ಕೇಳಿ ಎಲ್ಲರು ಸನ್ತಸಗೊನ್ದರು. ಮಾತನ್ನು ಮುನ್ದುವರಿಸಿದ ಶಿವರಾಮಯ್ಯ ’ ನನ್ಗೆ ಒನ್ದೆರದು ತಿನ್ದಗಳು ಸಮಯ ಬೇಕು. ಇಲ್ಲಿ ಅಳಿದುಳಿದ ಕೆಲಸಗಳನ್ನು ಮುಗಿಸಿ ನಿಮ್ಮನ್ನು ಸೇರುವೆನು’ . ಮಕ್ಕಳು ಅದಕ್ಕೆ ಸಮ್ಪೂರ್ಣ ಸಮ್ಮತಿಯನ್ನಿತ್ತು, ಎಲ್ಲರು ತಮ್ಮ ತಮ್ಮ ಊರಿಗೆ ಹೊರಟರು.

ಪ್ರಕ್ರುತಿಯೆ ತಾನು ಇರುವ ಕಾಲಕ್ಕೆ ತಕ್ಕಹಾಗೆ ಬದಲಾವಣೆ ಮಾಡಿಕೊಳ್ಳುತ್ತದೆ. ಕ್ರಿಮಿಕೀಟಗಳು ಬದಲಾವಣೆ ಮಾಡಿಕೊಳ್ಳುತ್ತವೆ. ಮನುಶ್ಯ ಮಾತ್ರ ಎತಕ್ಕೆ ಬದಲಾವಣೆಗಲಿಗೆ ಅದ್ದುಗೊಲು ಹಾಕಿಕೊಳ್ಳಬೇಕು? ಬದಲಾದ ಕಾಲಕ್ಕೆ ತಾನು ಬದಲಾಯಿಸಿಕೊಳ್ಳಬೇಕು. ಅದೆ ಪ್ರಕ್ರುತಿ ನಿಯಮ.

ಪಿಟಿಪಿಟಿ ಮಳೆ ಹನಿ ಬಿದ್ದ ಹಾಗೆ ಆಯ್ತು. ತಮ್ಮ ನೆನಪಿನ್ದಳದೈನ್ದ ಹೊರಗಡೆ ಬನ್ದ ಶಿವರಾಮಯ್ಯ ೩ ದಿನಗಳ ನನ್ತರ ತಮ್ಮ ಪ್ರಯಾಣಕ್ಕೆ ಸಿದ್ದತೆ ಮಾಡಿಕೊಳ್ಳುವ ಸಲುವಾಗಿ ಮನೆಯ ಕಡೆ ಹೊರಟರು

1 comment: