ಗಜವದನ ಬೇಡುವೆ |೨|
ಗಜವದನ ಬೇಡುವೆ ಗೌರಿ ತನಯ |೩|
ತ್ರಿಜಗ ವಂದಿತನೆ ಸುರ ನರ ಪೊರೆವನೆ
ಗಜವದನ ಬೇಡುವೆ!
ಪಾಶಾಂಕುಶಧರ ಪರಮ ಪವಿತ್ರ |೨|
ಮೂಷಕ ವಾಹನ ಮುನಿ ಜನ ಪ್ರೇಮ |೩|
ಗಜವದನ ಬೇಡುವೆ ಗೌರಿ ತನಯ
ತ್ರಿಜಗ ವಂದಿತನೆ ಸುರ ನರ ಪೊರೆವನೆ
ಗಜವದನ ಬೇಡುವೆ!
ಮೋದದಿ ನಿನ್ನಯ ಪಾದವ ತೋರೊ ಸಾಧುವಂದಿತನೆ ಆದರದಿಂದಲಿ |೨|
ಸರಸಿಜನಾಭ ಶ್ರೀ |೨|
ಸರಸಿಜನಾಭ ಶ್ರೀ ಪುರಂದರ ವಿಠ್ಠಲನ |೩|
ನಿರತ ನೆನೆಯುವಂತೆ ವರ ದಯ ಮಾಡೊ |೩|
ಗಜವದನ ಬೇಡುವೆ ಗೌರಿ ತನಯ
ತ್ರಿಜಗ ವಂದಿತನೆ ಸುರ ನರ ಪೊರೆವನೆ
ಗಜವದನ ಬೇಡುವೆ
ಬೇಡುವೆ! |೨|
Friday, February 05, 2010
Subscribe to:
Posts (Atom)